ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಆರಂಭವಾಗಿದೆ. ದೇಶಾದ್ಯಂತ ಮತ್ತು ವಿದೇಶಗಳಿಂದ ಕೋಟ್ಯಂತರ ಭಕ್ತರು ಮತ್ತು ಸಂತರು ಇಲ್ಲಿಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಸಂತರು ಮತ್ತು ಋಷಿಗಳು ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದಾಗಿ ಚರ್ಚೆಯ
ವಿಷಯವಾಗಿದ್ದಾರೆ. ಅವರಲ್ಲಿ ಒಬ್ಬರು ಐಐಟಿ ಬಾಬಾ ” ಅಭಯ್ ಸಿಂಗ್ ” ಅವರನ್ನು “ಎಂಜಿನಿಯರ್ ಬಾಬಾ” ಎಂದು ಕರೆಯಲಾಗುತ್ತದೆ.
ಮಹಾಕುಂಭ ಮೇಳದ ಸೆಂಟರ್ ಆಫ್ ಅಟ್ರಾಕ್ಷನ್ ಈ ಅಭಯ್ ಸಿಂಗ್ ಆಲಿಯಾಸ್ ಐಐಟಿ ಬಾಬಾ .ಈಗ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದ್ದಾರೆ.
ಐಐಟಿ ಬಾಬಾ ಆಲಿಯಾಸ್ ಅಭಯ್ ಸಿಂಗ್ ಹರಿಯಾಣದ ಝಜ್ಜರ್ ಜಿಲ್ಲೆಯವರು. ಐಐಟಿ ಪದವೀಧರರಾಗಿದ್ದು, ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ದೆಹಲಿಯಲ್ಲಿ ಐಐಟಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಿದರು. ನಂತರ ಐಐಟಿ ಮುಂಬೈನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಿದರು.
ಐಐಟಿಯಿಂದ ಪದವಿ ಪಡೆದ ನಂತರ, ಅವರು ಡಿಸೈನಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು ದೆಹಲಿ ಮತ್ತು ಕೆನಡಾದ ಉನ್ನತ ಕಂಪನಿಗಳಲ್ಲಿ ಕೆಲಸ ಮಾಡಿದರು. ಕೆನಡಾದಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ತಿಂಗಳಿಗೆ ಸುಮಾರು 3 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ ಅವರು
ಜೀವನದಲ್ಲಿ ಖಿನ್ನತೆಗೆ ಒಳಗಾದರು. ಅವರ ಸಹೋದರಿ ಕೆನಡಾಕ್ಕೆ ಕರೆಸಿಕೊಂಡರು. ಆದರೆ ಅಲ್ಲಿಯೂ ತೃಪ್ತಿ ಸಿಗಲಿಲ್ಲ. 4 ವರ್ಷ ಪ್ರೀತಿಸಿದ್ದ ಹುಡುಗಿಯನ್ನು ಬಿಟ್ಟು ಆಧ್ಯಾತ್ಮದ ಜೀವನದ ದಾರಿ ತುಳಿದರು.ಭಾರತಕ್ಕೆ ಹಿಂದಿರುಗಿ ಮನಾಲಿ, ಶಿಮ್ಲಾ ಮತ್ತು ಹರಿದ್ವಾರದಂತಹ ಸ್ಥಳಗಳಿಗೆ ಪ್ರಯಾಣಿಸಿದರು.
ಕೊರೊನಾ ಅವಧಿಯ ನಂತರ ಭಾರತಕ್ಕೆ ಹಿಂದಿರುಗಿ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ನಾಲ್ಕೂ ಧಾಮಗಳಿಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ಹಿಮಾಲಯದ ಆಳಕ್ಕೆ ಹೋಗಿ ನನ್ನನ್ನು ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ ಎನ್ನುತ್ತಾರೆ ಅಭಯ್ ಸಿಂಗ್. ಈಗ ಅಭಯ್ ಸಿಂಗ್ ತಮ್ಮ ಇಡೀ ಜೀವನವನ್ನು ಶಿವನಿಗೆ ಅರ್ಪಿಸಿಕೊಂಡಿದ್ದಾರೆ. “ಈಗ ನಾನು ಆಧ್ಯಾತ್ಮವನ್ನು ಆನಂದಿಸುತ್ತಿದ್ದೇನೆ. ನಾನು ವಿಜ್ಞಾನದ ಮೂಲಕ ಆಧ್ಯಾತ್ಮವನ್ನು ಅರ್ಥಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ
ಅವರು ಶ್ರೀ ಪಂಚದಶನಂ ಜುನಾ ಅಖಾರದ ಭಾಗವಾಗಿ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ
ಹರಿಯಾಣದ ಝಜ್ಜರ್ ನಿವಾಸಿಯಾದ ಐಐಟಿ ಬಾಬಾರವರ ತಂದೆ ಕರಣ್ ಗ್ರೆವಾಲ್ ಅವರು ವ್ರತ್ತಿಯಲ್ಲಿ ವಕೀಲರು ಇತ್ತೀಚಿನ ದಿನಗಳಲ್ಲಿ ಮಗನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದನ್ನು ಕಂಡು ಮೀಡಿಯಾದವರು ಪ್ರಶ್ನಿಸಿದಾಗ ಬಹಳ ದುಃಖಿತರಾಗಿ ” ನಮ್ಮ ಕುಟುಂಬವು ಅಭಯ್ ಮನೆಗೆ ಮರಳಬೇಕೆಂದು ಒತ್ತಾಯಿಸುತ್ತಿದೆ.ನಮಗೆ ಗೊತ್ತು ಅಭಯ್ ಅಧ್ಯಾತ್ಮ ಬಗ್ಗೆ ಅಪಾರ ಸಾಧನೆಯನ್ನು ಮಾಡಿದ್ದಾನೆ ಹೀಗಿರುವಾಗ ಮನೆಗೆ ಹಿಂದಿರುಗುವುದು ಅಷ್ಟು ಸುಲಭದ ಮಾತಲ್ಲ.ಆತ ಸನ್ಯಾಸಿಯಾಗಲು ನಿರ್ಧರಿಸಿರುವ ಬಗ್ಗೆ ಮಾಹಿತಿ ಇದೆ.ಅಭಯ್ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ ಹೊಂದಿದ್ದಾನೆ ಇದೇ ಕಾರಣದಿಂದ ಸನ್ಯಾಸತ್ವ ತೆಗೆದುಕೊಂಡಿದ್ದಾನೆ.ಕಳೆದ ಆರು ತಿಂಗಳವರೆಗೂ ನಾನು ಅವನೊಂದಿಗೆ ಸಂಪರ್ಕದಲ್ಲಿದ್ದೆ. ಆದಾದ ನಂತರ ಅವನು ನನ್ನ ಹಾಗೂ ನಮ್ಮ ಕುಟುಂಬದೊಂದಿಗಿನ ಎಲ್ಲಾ ಸಂಪರ್ಕವನ್ನು ಕಳೆದುಕೊಂಡಿದ್ದಾನೆ.ಎಂದು ಅಳಲು ತೊಡಿಕೊಂಡಿದ್ದಾರೆ.
ಈ ಹಿಂದೆ ಆತ ಹರಿದ್ವಾರದಲ್ಲಿ ಇದ್ದಾನೆ ಎಂಬ ಸುದ್ದಿ ತಿಳಿದು ಅಲ್ಲಿಯೇ ಅವರನ್ನು ಭೇಟಿಮಾಡಲು ಮುಂದಾದೆ ಅದರೆ ಆಗ ಆಗಲಿಲ್ಲ. ಈಗ ನೋಡಿದರೆ ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈತನ ಸುದ್ದಿ ಹರಿದಾಡುತ್ತಿದೆ.ದಯವಿಟ್ಟು ಮನೆಗೆ ಹಿಂತಿರುಗಿ ಬಾ ಎಂದು ನಾವೆಲ್ಲಾ ಕೋರಿಕೊಳ್ಳುತ್ತೇವೆ. ಅವರ ತಾಯಿ ಅವನ ಹಿಂತಿರುಗುವಿಕೆಯ ನಿರೀಕ್ಷೆಯಲ್ಲಿದ್ದಾರೆ.ಇನ್ನು ಅಭಯ್ ನಲ್ಲಿ ನೇರವಾಗಿ ಕೇಳಿದಾಗ ಆತ ಆಗುವುದಿಲ್ಲ ಎಂದು ಉತ್ತರ ನೀಡಿದ್ದಾನೆ.ನಾನು ಸನ್ಯಾಸತ್ವ ಸ್ವೀಕರಿಸಿದ್ದೇನೆ ಈಗ ನನ್ನಿಂದ ಅಸಾಧ್ಯ ಎಂದು ಐಐಟಿ ಬಾಬಾ ಹೇಳುತ್ತಿದ್ದಂತೆ ಬಾಬಾ ಪೋಷಕಕರು ಕಣ್ಣೀರಿಟ್ಟಿದ್ದಾರೆ