ಮಾಹಿದ್ದೀನ್ ಜುಮಾ ಮಸೀದಿ ಉಳಬೈಲ್ ನೀರುಮಾರ್ಗ ವತಿಯಿಂದ ಇಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಯಾತುಲ್ ಔಲಿಯಾ ಹೆಸರಿನಲ್ಲಿ ನಡೆಸುತ್ತಾ ಬಂದಿರುವ ಉರೂಸ್ ಕಾರ್ಯಕ್ರಮ ಜನವರಿ 26ರಂದು ಜರುಗಲಿದೆ. ಇದರ ಅಂಗವಾಗಿ ಜನವರಿ 24 ಹಾಗೂ 25ರಂದು ಎರಡು ದಿನಗಳ ಕಾಲ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಜನವರಿ 24ರಂದು ಉರೂಸ್ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯಿದ್ ನಿಝಾಮುದ್ದೀನ್ ಬಾಫಖಿ
ತಂಞಳ್ ನಡೆಸಲಿರುವರು ಎಂದು ಆಸೀಫ್ ತಾರಿಗುಡ್ಡೆ ಪತ್ರಿಕಾಗೋ಼ಷ್ಠಿಯಲ್ಲಿ ತಿಳಿಸಿದರು.
ಉಳಬೈಲ್ ಹಯಾತುಲ್ ಔಲಿಯಾ ದರ್ಗಾ ಪುರಾತನವಾದ ಇತಿಹಾಸವನ್ನು ಹೊಂದಿರುತ್ತದೆ. ಹಲವಾರು ಕಶ್ಫ್ ಕರಾಮತ್ತುಗಳಿಂದ ಪ್ರಸಿದ್ಧವಾಗಿರುತ್ತದೆ.
ಜನವರಿ 26 ರಂದು ಉರೂಸ್ ಕಾರ್ಯಕ್ರಮ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ಜರಗಲಿದೆ.ಸ್ವಾಬಿರಿಯ್ಯ ಅರೆಬಿಕ್ ಕಾಲೇಜು ಕಲಿಯಾರ್ ಪ್ರಾಂಶುಪಾಲರಾದ ಅಲ್ ಹಾಝ್ ಅಬ್ದುಲ್ ರಝಾಕ್ ಮಿಸ್ಬಾಹಿ ಬಾಯಾರ್ ನೇತ್ರತ್ವ ವಹಿಸಲಿದ್ದು, ಅಬ್ದುಲ್ ಅಝೀಝ್ ಇರ್ಫಾನಿ ಮಖ್ದೂಮಿ ಮುಖ್ಯ ಭಾಷಣಗೈಯಲಿದ್ದಾರೆ. ಕಾರ್ಯಕ್ರಮದಲ್ಲಿ ಘನವೆತ್ತ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್, ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಬಿ.ಝಡ್. ಜಮೀರ್ ಅಹಮ್ಮದ್, ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ್ ಲಾಡ್, ಮಂಗಳೂರು ಉತ್ತರ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಕ್ಫ್ ಮಂಡಳಿ ಮಾಜಿ ಅಧ್ಯಕ್ಷರಾದ ಎನ್.ಕೆ.ಎಂ ಶಾಫಿ ಸಅದಿ, ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಜಿ.ಎ.ಬಾವಾ, ಯಾಕೂಬ್ ಹೊಸನಗರ,ಅನ್ವರ್ ಬಾಷಾ,ವಕ್ಫ್ ಸಲಹಾ ಸಮಿತಿ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಉಪಾಧ್ಯಕ್ಷರಾದ ಫಕೀರಬ್ಬ ಮಾಸ್ಟರ್, ಅಬ್ದುಲ್ ಲತೀಫ್ ಗುರುಪುರ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಮುಹಮ್ಮದ್ ಹನೀಫ್ ಮಲ್ಲೂರು ಅಧ್ಯಕ್ಷತೆ ವಹಿಸಲಿದ್ದಾರೆ ಸ್ಥಳೀಯ ಜಮಾಅತ್ ಪ್ರಮುಖರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಫಯಾಝ್ ಅಲಿ ರಝ್ವಿ (ಖತೀಬರು,ಉಳಬೈಲ್ ಜುಮಾ ಮಸೀದಿ), ಮುಹಮ್ಮದ್ ಹನೀಫ್ ಮಲ್ಲೂರು, ಸಮೀರ್ (ಕಾರ್ಯದರ್ಶಿ ಉಳಬೈಲ್ ಜುಮಾ ಮಸೀದಿ) ಹಮೀದ್, ರಫೀಕ್ ಉಳಬೈಲ್,ಎಂ.ಟಿ ಕರೀಂ ಮಲ್ಲೂರು ಮುಂತಾದವರು ಉಪರಿದ್ದರು.
ಚಿತ್ರ : ಶಶಿ ಬೆಳ್ಳಾಯರು