ಮಂಗಳೂರು: ನಗರದ ಬಿಜೈಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪದ ಆದಿತ್ಯ ಕಮರ್ಷಿಯಲ್ ಕಾಂಪ್ಲೆಕ್ಸ್ ನ 3 ನೇ ಮಹಡಿಯಲ್ಲಿ ಕಾರ್ಯಚರಿಸುತ್ತಿದ್ದ ಕಲರ್ಸ್ ಯುನಿಸೆಕ್ಸ್ ಮಸಾಜ್ ಪಾರ್ಲರ್ ಮೇಲಿನ ದಾಳಿ ನಡೆಸಿದ ಸಂಬಂಧ ರಾಮಸೇನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ ಅವರನ್ನು ಕುಡುಪು ಬಳಿಯ ಅವರ ಮನೆಯಿಂದ ಪೊಲೀಸರು ಬಂಧಿಸಿದ್ದಾರೆ.
ರಾಮ ಸೇನೆಯ ಕಾರ್ಯಕರ್ತರು ಎನ್ನಲಾದವರು ಮಸಾಜ್ ಸೆಂಟರ್ಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದು, ಕಿಟಕಿಗಳ ಗಾಜುಗಳನ್ನು ಪುಡಿಗೈದಿದ್ದಾರೆ.ಅಲ್ಲದೇ ಮಸಾಜ್ ಪಾರ್ಲರ್ನಲ್ಲಿದ್ದ ಯುವತಿಯರ ಮೇಲೆಯೂ ಹಲ್ಲೆ ನಡೆಸಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 14 ಮಂದಿಯನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ನೀರುಮಾರ್ಗ ನಿವಾಸಿ ಹರ್ಷರಾಜ್, ಪುರಂದರ ಉಪ್ಪಳ, ಸಚಿನ್, ರವೀಶ್ ಪೆರ್ಮಂಕಿ, ಸುಕೇತ್ ಬೆಂಜನಪದವು, ವಾಮಂಜೂರು ನಿವಾಸಿಗಳಾದ ಅಂಕಿತ್, ಅಭಿಲಾಷ್,ಸಚಿನ್, ಮೂಡುಶೆಡ್ಡೆ ನಿವಾಸಿಗಳಾದ ಕಾಳಿಮುತ್ತು , ಮೋಹನ್ ದಾಸ್, ದೀಪಕ್, ವಿಗ್ನೇಶ್ ಸರಿಪಳ್ಳ, ಶರಣ್ ರಾಜ್ ಮಂಗಳಾದೇವಿ, ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ.
ಮಸಾಜ್ ಪಾರ್ಲರ್ ಮಾಲಕ ಸುಧೀರ್ ಶೆಟ್ಟಿ ನೀಡಿದ ದೂರಿನ ಅನ್ವಯ ಬರ್ಕೆ ಪೊಲೀಸರು ಬಿ ಎನ್ ಎಸ್ ಸೆಕ್ಷನ್ ಪ್ರಕಾರ 329(2), 324(5) 74, 351(3),115(2),109, 353, 190, ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ

ಮಂಗಳೂರಿನಲ್ಲಿ ನಡೆದ ಮಸಾಜ್ ಸೆಂಟರ್ ದಾಳಿಗೂ ಶ್ರೀರಾಮಸೇನೆಗೂ ಸಂಬಂಧವಿಲ್ಲ ಎಂದು ಶ್ರೀರಾಮಸೇನೆ ಮಂಗಳೂರು ವಿಭಾಗ ಅಧ್ಯಕ್ಷ ಜಯರಾಮ ಅಂಬೆಕಲ್ಲು ಸ್ಪಷ್ಟ ಪಡಿಸಿದ್ದಾರೆ.

