ಮಂಗಳೂರು: ನಗರದ ಬಿಜೈಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪದ ಮಸಾಜ್ ಪಾರ್ಲರ್ ಮೇಲಿನ ದಾಳಿ ಸಂಬಂಧಿಸಿ ರಾಮಸೇನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ ಸೇರಿದಂತೆ ಒಟ್ಟು 14 ಮಂದಿ ಆರೋಪಿಗಳನ್ನು ಬರ್ಕೆ ಪೊಲೀಸರು ನಿನ್ನೆ ಬಂಧಿಸಿದ್ದು.ಪ್ರಸಾದ್ ಅತ್ತಾವರ ಸಹಿತ 14 ಆರೋಪಿಗಳನ್ನು ಬರ್ಕೆ ಪೊಲೀಸರು ಇಂದು ಮಂಗಳೂರಿನ 6 ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಸದ್ಯ ಈ ಎಲ್ಲಾ ಆರೋಪಿಗಳನ್ನು ಮಂಗಳೂರು ನ್ಯಾಯಾಲಯ ಫೆಬ್ರವರಿ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ರಾಮ ಸೇನೆಯ ಕಾರ್ಯಕರ್ತರು ಎನ್ನಲಾದವರು ಮಸಾಜ್ ಸೆಂಟರ್ಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದು, ಕಿಟಕಿಗಳ ಗಾಜುಗಳನ್ನು ಪುಡಿಗೈದಿದ್ದಾರೆ.ಅಲ್ಲದೇ ಮಸಾಜ್ ಪಾರ್ಲರ್ನಲ್ಲಿ ಇದ್ದ ಯುವತಿಯರ ಮೇಲೆಯೂ ಹಲ್ಲೆ ಮಾಡಿದ ಘಟನೆ ಗುರುವಾರ ನಡೆದಿತ್ತು.
ಬಂಧಿತರನ್ನು ನೀರುಮಾರ್ಗ ನಿವಾಸಿ ಹರ್ಷರಾಜ್, ಪುರಂದರ ಉಪ್ಪಳ, ಸಚಿನ್, ರವೀಶ್ ಪೆರ್ಮಂಕಿ, ಸುಕೇತ್ ವಾಮಂಜೂರು ನಿವಾಸಿಗಳಾದ ಅಂಕಿತ್, ಅಭಿಲಾಷ್,ಸಚಿನ್, ಮೂಡುಶೆಡ್ಡೆ ನಿವಾಸಿಗಳಾದ ಕಾಳಿಮುತ್ತು , ಮೋಹನ್ ದಾಸ್ ದೀಪಕ್, ವಿಗ್ನೇಶ್ ಸರಿಪಳ್ಳ, ಶರಣ್ ರಾಜ್ ಮಂಗಳಾದೇವಿ, ಪ್ರದೀಪ್ ಪೂಜಾರಿ ಮತ್ತು ಪ್ರಸಾದ್ ಅತ್ತಾವರ್ ಎಂದು ಗುರುತಿಸಲಾಗಿದೆ.

