2025ನೇ ಸಾಲಿನ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಗಿದೆ. ಕೇಂದ್ರ ಸರ್ಕಾರ ಈ ಬಾರಿ 139 ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧಾರ ಮಾಡಿದೆ.ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಸಿನಿಮಾರಂಗದಲ್ಲಿನ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದೆ.

1973ರಲ್ಲಿ ಪಿ.ವಿ ನಂಜರಾಜ್ ಅವರ ಸಂಕಲ್ಪ ಸಿನೆಮಾದ ಮೂಲಕ ಶುರುವಾದ ಅನಂತ್ನಾಗ್ ಅವರ ಜರ್ನಿ, ಅಲ್ಲಿಂದ ಶ್ಯಾಮ್ ಬೆನಗಲ್ ಅವರ ದಖನಿ ,ಅಂಕುರ್, ಜಿ.ವಿ ಅಯ್ಯರ್ ಅವರ ಹಂಸಗೀತೆ, ಬಯಲುದಾರಿ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಮಿಂಚಿನ ಓಟ,ಜನ್ಮ ಜನ್ಮದ ಅನುಬಂಧ, ನೋಡಿ ಸ್ವ್ವಾಮಿ ನಾವಿರೋದು ಹೀಗೆ, ನಾರದ ವಿಜಯ,ಅವಸ್ಥೆ,ಹೊಸ ನೀರು,ಮುದುಡಿದ ತಾವರೆ ಅರಳಿತು, ಅನುಪಮಾ, ಮುಳ್ಳಿನ ಗುಲಾಬಿ, ಬೆಂಕಿಯ ಬಲೆ, ಒಲವು ಮೂಡಿದಾಗ, ಅರುಣ ರಾಗ, ಹೆಂಡ್ತಿಗೆ ಹೇಳ್ಬೇಡಿ,ಗಣೇಶನ ಮದುವೆ ಗಗನ, ಗೌರಿ ಗಣೇಶ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅನಂತ್ನಾಗ್ ನಾಯಕನ ಪಾತ್ರದಲ್ಲಿ ನಟಿಸಿದರೆ, ಮುಂಗಾರು ಮಳೆ, ಈ ಬಂಧನ, ಅರಮನೆ, ಗಣೇಶ ಮತ್ತೆ ಬಂದ, ಮೈನಾ, ಗೂಗ್ಲಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಜಿಎಫ್, ಗಾಳಿಪಟ 2 ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರ ನೀಡಿದರೂ ಅದಕ್ಕೆ ನ್ಯಾಯ ಒದಗಿಸಿದ್ದಾರೆ.

ಅವರು ಪ್ರಧಾನವಾಗಿ ಕನ್ನಡ ಚಲನಚಿತ್ರಗಳಲ್ಲಿ ಮತ್ತು ಕೆಲವು ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟರಾಗಿ ಕಾಣಿಸಿಕೊಂಡಿದ್ದಾರೆ. 5 ದಶಕಗಳ ಕಾಲದ ವೃತ್ತಿಜೀವನದಲ್ಲಿ ಅವರು 270 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

