ಒಂದಲ್ಲ ಒಂದು ವಿಷಯಕ್ಕಾಗಿ ಸದಾ ಸುದ್ದಿಯಲ್ಲಿರುವ ವಿವಾದಾತ್ಮಕ ಬಾಲಿವುಡ್ ಬೆಡಗಿ ರಾಖಿ ಸಾವಂತ್ 3ನೇ ಮದುವೆಯಾಗಲು ಸಜ್ಜಾಗಿದ್ದಾರೆ.ಪಾಕಿಸ್ತಾನದ ನಟ ದೋಡಿ ಖಾನ್ ಅವರನ್ನು ವರಿಸಲಿದ್ದಾರೆ.

ಇತ್ತೀಚೆಗೆ ಖಾಸಗಿ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ದೋಡಿ ಖಾನ್ ಅವರನ್ನು ಪ್ರೀತಿಸುತ್ತಿರುವುದಾಗಿ ರಾಖಿ ಹೇಳಿಕೊಂಡಿದ್ದರು. ಸದ್ಯದಲ್ಲೇ ಮದುವೆಯಾಗುವುದಾಗಿಯೂ ತಿಳಿಸಿದ್ದರು.
ರಾಖಿ ಸಾವಂತ್ ಇಲ್ಲಿಯವರೆಗೆ ಎರಡು ಬಾರಿ ವಿವಾಹವಾಗಿದ್ದಾರೆ. ಆದರೆ ಅವರ ಎರಡೂ ವಿವಾಹಗಳು ನೋವಿನಿಂದ ಕೊನೆಗೊಂಡಿವೆ. ಆಕೆಯ ಮೊದಲ ಮದುವೆ 2019ರಲ್ಲಿ ರಿತೇಶ್ ಸಿಂಗ್ ಜೊತೆ ನೆರವೇರಿತು. ಆದರೆ ಅವರಿಬ್ಬರೂ 2022 ರಲ್ಲಿ ವಿಚ್ಛೇದನ ಪಡೆದರು. ನಂತರ, ಅದೇ ವರ್ಷದಲ್ಲಿ ಮೈಸೂರಿನ ಆದಿಲ್ ಖಾನ್ ದುರಾನಿ ಅವರನ್ನು ಎರಡನೇ ಬಾರಿಗೆ ವಿವಾಹವಾದರು.

ಆದರೆ ಈ ಮದುವೆ ಕೂಡಾ ಬಹಳ ದಿನಗಳವರೆಗೆ ಉಳಿಯಲಿಲ್ಲ. ಇಬ್ಬರೂ 2023ರಲ್ಲಿ ವಿಚ್ಛೇದನ ಪಡೆದರು. ಇದಾದ ಬಳಿಕ ಇದೀಗ ಮೂರನೇ ಮದುವೆಯ ಸಂಭ್ರಮದಲ್ಲಿದ್ದಾರೆ ರಾಖಿ ಸಾವಂತ್. ಅಚ್ಚರಿಯ ವಿಷಯವೆಂದರೆ ಮೂರನೇ ಮದುವೆಯನ್ನು ಭಾರತದಲ್ಲಿ ಅಲ್ಲ ಪಾಕಿಸ್ತಾನದಲ್ಲಿ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ ಈ ನಟಿ.



ಈ ಬಾರಿ ಉತ್ತಮ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಂಡಿದ್ದೇನೆ ಪಾಕಿಸ್ತಾನದ ಜನರನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ಅಲ್ಲಿ ನನಗೆ ತುಂಬಾ ಜನ ಅಭಿಮಾನಿಗಳಿದ್ದಾರೆ. ಈ ರೀತಿಯ ಮದುವೆಗಳಿಂದ 2 ದೇಶಗಳ ನಡುವೆ ಶಾಂತಿ ನೆಲೆಸುತ್ತೆ ಎಂದು ಅಂತ ಹೇಳಿಕೊಂಡಿದ್ದಾರೆ. ಬಾಯ್ಫ್ರೆಂಡ್ ಡೋಡಿ ಖಾನ್ ಬಗ್ಗೆಯೂ ಮಾತಾಡಿದ ರಾಖಿ ಸಾವಂತ್, ಅವರು ಪಾಕಿಸ್ತಾನದಲ್ಲಿ ಚಲನಚಿತ್ರ ನಟ ಹಾಗೂ ಪೊಲೀಸ್ ಆಫೀಸರ್ ಆಗಿದ್ದಾರೆ. “ಮದುವೆ ಇಸ್ಲಾಮಿಕ್ ರೀತಿಯಲ್ಲಿ ಪಾಕಿಸ್ತಾನದಲ್ಲಿ ಆಗುತ್ತೆ. ರಿಸೆಪ್ಷನ್ ಭಾರತದಲ್ಲಿ ನಡೆಯಲಿದೆ. ಹನಿಮೂನ್ ಸ್ವಿಟ್ಜರ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ಸ್ನಲ್ಲಿ.ಮದುವೆ ನಂತರ ನಾವಿಬ್ಬರು ದುಬೈನಲ್ಲಿ ನೆಲೆಸಲಿದ್ದೇವೆ” ಎಂದು ರಾಖಿ ಹೇಳಿ ಕೊಂಡಿದ್ದಾರೆ.

