ಭಾರತದ ಸ್ಟಾರ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೊತೆ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ಪಡೆದು ಇದೀಗ ಒಂದು ವರ್ಷ ಕಳೆದಿದೆ. ಶೋಯೆಬ್ ಮಲಿಕ್ 2024 ರ ಜನವರಿಯಲ್ಲಿ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ವಿಚ್ಛೇದನದ ಒಂದು ವರ್ಷದ ನಂತರ ಇದೀಗ ಸಾನಿಯಾ ಮಿರ್ಜಾ ತನ್ನ ಮಾಜಿ ಪತಿ ಶೋಯೆಬ್ ಮಲಿಕ್ ಹೆಸರನ್ನು ದುಬೈ ಮನೆಯಿಂದ ತೆಗೆದುಹಾಕಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

2010 ರಲ್ಲಿ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಹೈದರಾಬಾದ್ನಲ್ಲಿ ವಿವಾಹವಾಗಿದ್ದರು. 2018 ರಲ್ಲಿ, ಸಾನಿಯಾ ಮಿರ್ಜಾ ಇಜಾನ್ಗೆ ಜನ್ಮ ನೀಡಿದ್ದರು. ಆದರೆ ಈ ಜೋಡಿ ಬಹುಕಾಲ ಒಟ್ಟಿಗೆ ಬಾಳಲು ಸಾಧ್ಯವಾಗಲಿಲ್ಲ. ನಂತರ ಇಬ್ಬರೂ 2023 ರಲ್ಲಿ ವಿಚ್ಛೇದನ ಪಡೆದರು. ಇದೀಗ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಶೋಯೆಬ್ ಮಲಿಕ್ ವಿವಾಹವಾಗಿದ್ದಾರೆ.

ವರದಿಗಳ ಪ್ರಕಾರ, ಸಾನಿಯಾ ಮಿರ್ಜಾ ತನ್ನ ದುಬೈ ಮನೆಯ ಮೇಲೆ ಶೋಯೆಬ್ ಮಲಿಕ್ ಬದಲಿಗೆ ತನ್ನ ಮಗ ಇಜಾನ್ ಹೆಸರಿಗೆ ಬರೆದಿದ್ದಾರೆ. ಈ ಬದಲಾವಣೆಯು ಸಾನಿಯಾ ಮಿರ್ಜಾಗೆ ಹೊಸ ಆರಂಭವಾಗಿದೆ. ಏಕೆಂದರೆ ಅವರು ತಮ್ಮ ಹೊಸ ಮನೆಯಲ್ಲಿ ಅನೇಕ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದ್ದಾರೆ.

ಸಾನಿಯಾ ಮಿರ್ಜಾ ಈಗ ದುಬೈನಲ್ಲಿರುವ ಮನೆಯಲ್ಲಿ ತನ್ನ ಮಗ ಇಜಾನ್ ಜೊತೆ ವಾಸಿಸಲು ಯೋಜಿಸುತ್ತಿದ್ದಾರೆ. ವರದಿಗಳ ಪ್ರಕಾರ, ಮನೆಯ ಕೆಲಸವು ಮುಕ್ತಾಯದ ಹಂತದಲ್ಲಿದೆ. ಸಾನಿಯಾ ಮಿರ್ಜಾ ಅವರ ಸ್ಥಳಾಂತರಕ್ಕೂ ಮುನ್ನ ಸಣ್ಣ ಕೆಲಸಗಳು ಮಾತ್ರ ಉಳಿದಿವೆ. ತನ್ನ ಮಗನೊಂದಿಗೆ ಯುಎಇಯಲ್ಲಿ ದೀರ್ಘಕಾಲ ವಾಸಿಸುತ್ತಿರುವ ಸಾನಿಯಾ ಮಿರ್ಜಾ, ತನ್ನ ಮಗ ಇಜಾನ್ ತನ್ನ ದೊಡ್ಡ ಸ್ನೇಹಿತ ಎಂದು ಬಣ್ಣಿಸಿದ್ದಾರೆ.

