ಅಹಮದಾಬಾದ್ ; ಭಾರತದ ಬಿಲಿಯನೇರ್ ಉದ್ಯಮಿ, ಅದಾನಿ ಗ್ರೂಪಿನ ಮುಖ್ಯಸ್ಥ ಗೌತಮ್ ಅದಾನಿಯವರ ಕಿರಿಯ ಮಗ ಜೀತ್ ಅದಾನಿಯವರ ವಿವಾಹವು ಗುಜರಾತಿನ ವಜ್ರದ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿಯಾದ ದಿವಾ ಜೈಮಿನ್ ಶಾ ಅವರೊಂದಿಗೆ ಇಂದು ಅತ್ಯಂತ ಸರಳ ಮತ್ತು ಸಾಂಪ್ರದಾಯಿಕ ಪದ್ಧತಿಗಳೊಂದಿಗೆ ನಡೆದಿದೆ.
ಮಗನ ಮದುವೆಗೆ ಯಾವುದೇ ಗಣ್ಯರು ಮತ್ತು ಸೆಲೆಬ್ರಿಟಿಗಳನ್ನು ಆಹ್ವಾನಿಸದೆ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಅಹಮದಾಬಾದಿನ ಶಾಂತಿಗ್ರಾಮದಲ್ಲಿ ಜೈನ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮವು ನೆರವೇರಿತು. ಗೌತಮ್ ಅದಾನಿಯವರ ಈ ಸರಳತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ತಮ್ಮ ಮಗನ ಮದುವೆಯ ಹಿನ್ನೆಲೆಯಲ್ಲಿ ಗೌತಮ್ ಅದಾನಿ ಅವರು 10,000 ಕೋಟಿ ರೂ.ಗಳನ್ನು ವಿವಿಧ ಸಾಮಾಜಿಕ ಉದ್ದೇಶಗಳಿಗೆ ವಿನಿಯೋಗಿಸಲು ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಜೀತ್ ಅದಾನಿ ಮತ್ತು ದಿವಾ ಶಾ ಅವರ ಮದುವೆಯ ವಿಡಿಯೋವನ್ನು ಗೌತಮ್ ಅದಾನಿಯವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಜೀತ್ ಅದಾನಿ ಮತ್ತು ದಿವಾ ಶಾ 2023ರ ಮಾರ್ಚ್ 14ರಂದು ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು ಅಹಮಾದಾಬಾದ್ನಲ್ಲಿ ಈ ಜೋಡಿ ವೈವಾವಿಕ ಜೀವನಕ್ಕೆ ಕಾಲಿಟ್ಟಿದೆ. ಫೆಬ್ರವರಿ 5ರಂದೇ ವಿವಾಹಪೂರ್ವ ಆಚರಣೆಗಳು ಪ್ರಾರಂಭವಾಗಿದ್ದವು.


