ಸುರತ್ಕಲ್ ; ಅಗರಿ ಎಂಟರ್ ಪ್ರೈಸಸ್ ಸುರತ್ಕಲ್ ಶಾಖೆಯಲ್ಲಿ ಅಗರಿ ಹಬ್ಬ “ಹಬ್ಬಗಳ ಉತ್ಸವ -2025 “ನೇ ಸಾಲಿನ 6ನೇ ಹಂತದ 4ನೇ ಡ್ರಾ ಮತ್ತು ಪ್ರೆಸ್ಟಿಜ್ ಉತ್ಪನ್ನಗಳ ಮಾರಾಟ ಮತ್ತು ಸೇವಾ ಮೇಳದ ಉದ್ಘಾಟನೆಯನ್ನು ಶ್ರೀ ದುರ್ಗಾ ಡೆವಲಪರ್ಸ್ ನ ಮಾಲಕರಾದ ಪುಂಡಲೀಕ ಹೊಸಬೆಟ್ಟು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕಾರ್ಯಕ್ರಮದ ಬಗ್ಗೆ ಹಾಗೂ ಅಗರಿ ಸಂಸ್ಥೆಗಳ ಸಿಬ್ಬಂದಿಗಳು ಗ್ರಾಹಕರೊಂದಿಗೆ ವ್ಯವಹರಿಸುವ ರೀತಿಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದರು. ಕಳೆದ 25 ವರ್ಷಗಳಿಂದ ಅಗರಿ ಸಮೂಹ ಸಂಸ್ಥೆಗಳನ್ನು ಗಮನಿಸುತ್ತಿದ್ದು ಡ್ರಾಗಳನ್ನು ಹಾಗೂ ಅಗರಿ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಪ್ರಸ್ತಾಪಿಸಿ ಶ್ಲಾಘಿಸಿದರು.



ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಸತೀಶ್ ಅಮೀನ್ ಮದ್ಯ.ಉದ್ಯಮಿ ಎಂ.ಆರ್.ಪಿ.ಎಲ್, ಶ್ರೀಮತಿ ಡೀನಾ ಲೋಬೋ ಮಾಲಕರು,ಐರಾ ಯುನಿಸೆಕ್ಸ್ ಸಲೂನ್, ಶ್ರೀ ಆಶ್ರಯ ಶೆಟ್ಟಿ, ಚೈತನ್ಯ ಇಂಜಿನಿಯರ್ಸ & ಕಾಂಟ್ರಕ್ಟರ್, ಶ್ರೀ ಇರ್ಫಾನ್ ಇಡೆನ್ ಕ್ರಷ್ಣಾಪುರ,ಸದಸ್ಯರು ಇಡೆನ್ ಸ್ಪೋರ್ಟ್ಸ್ ಕ್ಲಬ್, ಶ್ರೀ ಇಕ್ಬಾಲ್, ಹಿಲ್ ಲೈಟ್ ಲೈಂಟಿಂಗ್ ಸ್ಟುಡಿಯೊ ಮಂಗಳೂರು, ಶ್ರೀ ದಾಮೋದರ್ ಶೆಟ್ಟಿ, ಮರ್ಚೆಂಟ್ ನಾವಿ.ಇಟಲಿ, ಶ್ರೀ ಸಂತೋಷ್, ಎ.ಎಸ್,ಎಂ ಪ್ರೇಸ್ಟಿಜ್,ಟಿ.ಟಿ.ಕೆ ಕಂಪೆನಿ, ಶ್ರೀ ರಕ್ಷಿತ್ ಎ.ಎಸ್.ಎಂ, ಎಲ್.ಜಿ ಕಂಪೆನಿ ,ಶ್ರೀ ಗಣೇಶ್ ರಾವ್ ,ರಾವ್ ಬ್ರದರ್ಸ್, ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಕಳೆದ ಸಾಲಿನ ಅಗರಿ ಹಬ್ಬ ಹಬ್ಬಗಳ ಉತ್ಸವದ ಡ್ರಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ 4ನೇ ಹಂತದ ವಿಜೇತರನ್ನು ಅತಿಥಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಆರಿಸಲಾಯಿತು.ಅಗರಿ ಎಂಟರ್ಪ್ರೈಸ್ ನ ಮಾಲೀಕರಾದ ಅಗರಿ ರಾಘವೇಂದ್ರ ರಾವ್ ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು ಅವರು ತಮ್ಮ ಪ್ರಸ್ತಾವನೆಯಲ್ಲಿ ಪ್ರೆಸ್ಟೀಜ್ ಉತ್ಪನ್ನಗಳ ಮಾರಾಟ ಮತ್ತು ಸೇವಾಮೇಳದ ಪ್ರಾಮುಖ್ಯತೆ, ಗ್ರಾಹಕರಿಗೆ ಆಗುವ ಪ್ರಯೋಜನ ಹಾಗೂ ಹೊಸ ಉತ್ಪನ್ನಗಳ ಪರಿಚಯವನ್ನು ಮಾಡಿಸಿದರು. ಪ್ರೆಸ್ಟೀಜ್ ಉತ್ಪನ್ನಗಳ ಮೇಳ ಫೆಬ್ರವರಿ 10 ರಿಂದ 22 ರವರೆಗೆ ಅಗರಿ ಎಂಟರ್ಪ್ರೈಸ್ ನ ಎಲ್ಲಾ ಶಾಖೆಗಳಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದರು. ಶೇಷಶಯನ ಕಾರಿಂಜ ಕಾರ್ಯಕ್ರಮವನ್ನು ನಿರೂಪಿಸಿದರು ಈ ಸಂಧರ್ಭದಲ್ಲಿ ಅಗರಿ ಸಂಸ್ಥೆಯ ಗ್ರಾಹಕರು, ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

