ಸುರತ್ಕಲ್ : ದೇವಸ್ಥಾನಗಳ ಬ್ರಹ್ಮಕಲಶೋತ್ಸವದ ವಿಶೇಷ ಸಂಚಿಕೆಗಳನ್ನು ಮುದ್ರಿಸಿ, ಭಕ್ತರಿಗೆ ಉಚಿತವಾಗಿ ನೀಡುತ್ತಿರುವ ರಜನ್ ಕೆ. ಕಾವೂರು ಸಂಪಾದಕತ್ವದ ಕರಾವಳಿ ಕೆಸರಿ ನ್ಯೂಸ್ ಪತ್ರಿಕೆಯನ್ನು ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅದಮಾರು ಮಠದ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿ ಆಶೀರ್ವದಿಸಿದರು.


ಈ ಬಿಡುಗಡೆ ಸಮಾರಂಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ರಂಗನಾಥ ಭಟ್, ಪತ್ರಕರ್ತ ರಜನ್ ಕೆ. ಕಾವೂರು, ಶ್ರೀ ಜಗನ್ನಾಥ ಭಟ್(ರಾಜ), ಶ್ರೀ ರಾಮದಾಸ್ ಪುತ್ರನ್, ರಮಾನಂದ ಅಡ್ಮೇಮರ್,ಖ್ಯಾತ ಲೇಖಕಿ ಶಕುಂತಳಾ ಭಟ್, ಶ್ರೀ ರಾಮ್ ಭಟ್, ಖ್ಯಾತ ಜ್ಯೋತಿಷಿ ಶಿವರಾಯ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಖ್ಯಾತ ಟಿವಿ ನಿರೂಪಕ, ಪತ್ರಕರ್ತ ನವೀನ್ ಶೆಟ್ಟಿ ಅಡ್ಮೆಮಾರ್ ನಿರೂಪಿಸಿದರು.



