ಮುಲ್ಕಿ : ಹಳೆಯಂಗಡಿಯ ಪ್ರತಿಷ್ಠಿತ ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ (ಪಿಸಿಎ )ಬ್ಯಾಂಕಿನ 2025- 29 ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಸ್.ಎಸ್.ಸತೀಶ್ ಭಟ್ ಅವರು ಸತತ ಮೂರನೇ ಬಾರಿಗೆ ಪುನರಾಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ ಶ್ರೀಮತಿ ಮೀರಾ ಬಾಯಿ.ಕೆ ಅವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾದ ಸತೀಶ್ ಭಟ್ ಮಾತನಾಡಿ ಸಂಘವು ಈಗಾಗಲೇ ಒಂದು ಕೋಟಿ ಲಾಭದಲ್ಲಿದ್ದು ಮುಂದಿನ ಐದು ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಎರಡು ಕೋಟಿ ಲಾಭದ ಜೊತೆಗೆ ಸಂಘದ ಅಭಿವೃದ್ಧಿ ಕಾರ್ಯವನ್ನು ಮಾಡಲಿದ್ದೇನೆ ಎಂದರು.

ನೂತನ ನಿರ್ದೇಶಕರಾಗಿ ಧರ್ಮಾನಂದ ಶೆಟ್ಟಿಗಾರ್, ವಿನೋದ್ ಕುಮಾರ್ ಬೊಳ್ಳೂರು,ಅಶೋಕ್ ಬಂಗೇರ, ಎಚ್.ವಸಂತ್,ಮುಖೇಶ್ ಸುವರ್ಣ, ಸೇಸಪ್ಪ ಟಿ.ಸಾಲ್ಯಾನ್ ,ಶಿವರಾಮ,ಸಂಧ್ಯಾ,ಧನಂಜಯ, ರೋಶನ್. ಬಿ ಮುಂತಾದವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಬ್ಯಾಂಕಿನ ಸಭಾಭವನದಲ್ಲಿ ನಡೆದ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ಪ್ರಕಿಯೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಮಂಗಳೂರು ಸಹಕಾರ ಸಂಘಗಳ ನಿಭಂದಕರ ಕಚೇರಿಯ ನಾಗೇಂದ್ರ. ಬಿ ಅವರು ಸಹಕರಿಸಿದರು

