ಮಂಗಳೂರು :ಎಸ್ಬಿ ಗ್ರೂಪ್ಸ್ ಬ್ಯಾನರ್ ಅಡಿಯಲ್ಲಿ ಶಿಯಾನಾ ಪ್ರೊಡಕ್ಷನ್ ಹೌಸ್ನ ಪ್ರತೀಕ್ ಪೂಜಾರಿ ನಿರ್ಮಾಣದ ಯುವ ನಿರ್ದೇಶಕ ಭರತ್ ಶೆಟ್ಟಿ ನಿರ್ದೇಶಿಸಿರುವ ವಿಭಿನ್ನ ಶೈಲಿಯ ತುಳು ಚಲನಚಿತ್ರ “ಪಿಲಿಪಂಜ”ದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಒಟ್ಟು 3ಹಂತದಲ್ಲಿ ಚಿತ್ತೀಕರಣ ನಡೆದಿದ್ದು ಮುಡಿಪು, ಹೂ ಹಾಕುವ ಕಲ್ಲು, ವರ್ಕಾಡಿ, ನರಿಂಗಾನ,ಇರಾ, ಸಾಲೆತ್ತೂರು, ಕುಡ್ತಮುಗೇರು,ಕಾಡುಮಠ ಹಾಗೂ ಕುಳಾಲು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಫೆ:6ರಂದು ಕುಂಬಳಕಾಯಿ ಹೊಡೆಯುವ ಮೂಲಕ ಯಶಸ್ವಿಯಾಗಿ ಚಿತ್ರೀಕರಣವನ್ನು ಮುಗಿಸಿದೆ.ಅಲ್ಲದೆ ಸದ್ಯದಲ್ಲೇ ಚಿತ್ರತಂಡ ಸಿನೆಮಾವನ್ನು ತೆರೆಗೆ ತರುವ ತಯಾರಿಯಲ್ಲಿದೆ.

ಚಿತ್ರದಲ್ಲಿ 2 ಹಾಡು ಹಾಗೂ 2 ಸಾಹಸ ದ್ರಶ್ಯಗಳಿವೆ. ಕರಾವಳಿಯ ಮನಮೋಹಕ ದ್ರಶ್ಯವನ್ನು ಉದಯ್ ಬಳ್ಳಾಲ್ ಅವರ ಕ್ಯಾಮರ ಕೈಚಳಕದಲ್ಲಿ ಬಹಳ ಸುಂದರವಾಗಿ ಮೂಡಿಬಂದಿದೆ.
ಪ್ರತೀಕ್ ಯು.ಪೂಜಾರಿ ಚಿತ್ರದ ನಿರ್ಮಾಪಕರಾಗಿದ್ದು ,ಕಥೆ ಮತ್ತು ನಿರ್ದೇಶನ ಭರತ್ ಶೆಟ್ಟಿ,ಚಿತ್ರಕಥೆ- ಸಂಭಾಷಣೆ ಸುರೇಶ್ ಬಲ್ಮಠ, ಎಕ್ಸಿಕ್ಯೂಟಿವ್ ಪ್ರೊಡ್ಯೂಷರ್ ರಮೇಶ್ ರೈ ಕುಕ್ಕುವಳ್ಳಿ , ಉದಯ್ ಬಳ್ಳಾಲ್ ಅವರ ಛಾಯಾಗ್ರಹಣವಿದೆ, ಲಾಯ್ ವೆಲಂಟೀನ್ ಸಲ್ಡಾನ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.ಸಂಕಲನ ಶ್ರೀನಾಥ್ ಪವಾರ್, ಸಹನಿರ್ದೇಶನ ಅಕ್ಷತ್ ವಿಟ್ಲ, ಸಹಾಯಕ ನಿರ್ದೇಶಕ ಸಜೇಶ್ ಪೂಜಾರಿ, ಪ್ರಚಾರ ಜಗನ್ನಾಥ ಶೆಟ್ಟಿ ಬಾಳ, ಸಾಹಸ- ನಿರ್ದೇಶನ ಸುರೇಶ್ ಶೆಟ್ಟಿ ಮತ್ತು ನವೀನ್ ಲೋಬೋ, ನೃತ್ಯ ಸಂಯೋಜನೆ ರಾಜೇಶ್ ಕಣ್ಣೂರು, ಪ್ರೊಡಕ್ಷನ್ಸ್ ಮೆನೇಜರ್ ಕಾರ್ತಿಕ್ ಶೆಟ್ಟಿ.

ತಾರಾಗಣದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವ ಪ್ರಕಾಶ್ ಪೂಂಜ ಹರೇಕಳ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು,ವಿಜಯಹರಿ ರೈ ಕುರಿಯ, ದಯಾನಂದ ಬೆಟ್ಟಂಪಾಡಿ, ಭಾಸ್ಕರ ಮಣಿಪಾಲ, ರೂಪಶ್ರೀ ವರ್ಕಾಡಿ, ಶ್ರೀಮತಿ ಜಯಶೀಲ, ರಾಧಿಕಾ, ದಿಶಾರಾಣಿ ಮುಂತಾದವರು ಅಭಿನಯಿಸಿದ್ದಾರೆ.




