ಮಂಗಳೂರು : ಸುವರ್ಣ ಕದಳಿ ವಿವಿಧೋದ್ದೇಶ ಸಹಕಾರಿ ಸಂಘ( ನಿ) ಇದರ ಆಡಳಿತ ಮಂಡಳಿಯ ಚುನಾವಣೆ ಶುಕ್ರವಾರ ಸಂಘದ ಕಛೇರಿಯಲ್ಲಿ ನಡೆಯಿತು.ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಶ್ರೀ ಸತೀಶ್ ಕುಮಾರ್ ಮಾಲೆಮಾರ್ ಅವರು ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡರೆ, ಕೆ.ಜಗಜೀವನ್ ದಾಸ್ ಎರಡನೇ ಬಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.ಸಹಕಾರ ಇಲಾಖೆಯಿಂದ ನಿಯುಕ್ತರಾದ ಚುನಾವಣಾಧಿಕಾರಿ ಶ್ರೀ ನವೀನ್ ಕುಮಾರ್ ಎಂ.ಎಸ್ ರವರು ಚುನಾವಣಾ ಪ್ರಕ್ರಿಯೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಸಿ ಹೆಚ್ ಮೋಹನ್, ಕೆ ನಾಗೇಶ್ ಚಿಲಿಂಬಿ, ಗೋಪಿನಾಥ್ ಜೋಗಿ, ಎಂ ದಿನೇಶ್ ಜೋಗಿ, ಶ್ರೀಮತಿ ಸುನೀತಾ ರಮಾನಾಥ, ಪ್ರಕಾಶ್ ಜೋಗಿ, ಎಸ್ ಸುಧಾಕರ ಜೋಗಿ, ಶ್ರೀಮತಿ ನಿಶಾ ಶಶಿಕುಮಾರ್, ಶ್ರೀಮತಿ ಎನ್ ಸುಮತಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಶಾಲಾಕ್ಷಿ ಉಪಸ್ಥಿತರಿದ್ದರು.

