ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವರ್ಷವಾರು ಕೊಂಕಣಿ ಸಾಹಿತ್ಯ ,ಕಲೆ,ಜಾನಪದ ಈ ಮೂರು ಕ್ಷೇತ್ರದಲ್ಲಿ ಸಾಧನೆಗೈದ ಕೊಂಕಣಿ ಮಹನೀಯರನ್ನು ಗೌರವಿಸಲಾಗುತ್ತಿದ್ದು ಪ್ರಸ್ತುತ ಸಾಲಿನಲ್ಲಿ 2024 ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಹಾಗೂ ಪುಸ್ತಕ ಪುರಸ್ಕಾರಕ್ಕಾಗಿ ಒಟ್ಟು ಐದು ಮಂದಿಯನ್ನು ಆಯ್ಕೆ ಮಾಡಿದ್ದೇವೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2024 ನೇ ಸಾಲಿನ ಗೌರವ ಪ್ರಶಸ್ತಿ:
ಕೊಂಕಣಿ ಸಾಹಿತ್ಯ: ಶ್ರೀ ಎಂ.ಪ್ಯಾಟ್ರಿಕ್ ಮೋರಸ್, ಮಂಗಳೂರು. ಕೊಂಕಣಿ ಕಲೆ: ಶ್ರೀ ಜೋಯಲ್ ಪಿರೇರಾ,ಮಂಗಳೂರು. ಕೊಂಕಣಿ ಜಾನಪದ: ಶ್ರೀಮತಿ ಸೊಬೀತಾ ಮೊತೇಶ್ ಕಾಂಬ್ರೆಕರ್,ಹಳಿಯಾಳ ಇವರು ಆಯ್ಕೆಯಾಗಿದ್ದಾರೆ. ಅಲ್ಲದೆ 2024ನೇ ಸಾಲಿನ ಪುಸ್ತಕ ಪುರಸ್ಕಾರ : ಕೊಂಕಣಿ ಕವನ ಪುಸ್ತಕ -ಪಾಲ್ವಾ ಪೊಂತ್ ” ಶ್ರೀಮತಿ ಫೆಲ್ಸಿ ಲೋಬೋ ದೇರೆಬೈಲ್ ಹಾಗೂ ಕೊಂಕಣಿ ಲೇಖನ ಪುಸ್ತಕ ಪ್ರಶಸ್ತಿ ಶೆತಾಂ ಭಾಟಾಂ ತೊಟಾಂನಿ – ಶ್ರೀ ವಲೇರಿಯನ್ ಸಿಕ್ವೇರ ಕಾರ್ಕಳ ಇವರು ಆಯ್ಕೆಯಾಗಿ ದ್ದಾರೆ.

ಕರ್ನಾಟಕ ಕೊಂಕಣಿ ಸಾಹಿತ್ಯ ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಮೈಸೂರು ಸಹಯೋಗದೊಂದಿಗೆ 23 ಮಾರ್ಚ್ 2025, ಆದಿತ್ಯವಾರ ಸಂಜೆ 5.00 ಗಂಟೆಗೆ ಕೊಂಕಣ್ ಭವನ್, ವಿಜಯನಗರ್ 2nd ಸ್ಟೇಜ್, ಮೈಸೂರಿನಲ್ಲಿ ಜರುಗಲಿರುವುದು. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ. ಹರೀಶ್ ಗೌಡ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿರುವರು ವಿಧಾನಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯನವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ವಲೇರಿಯನ್ ಡಿಸೋಜ(ವಲ್ಲಿ ವಗ್ಗ),ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಶ್ರೀ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ- ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಪ್ರತಿಕಾ ಗೋಷ್ಠಿಯಲ್ಲಿ ಜೋಕಿಂ ಸ್ಟ್ಯಾನಿ ಆಲ್ವಾರಿಸ್,
ರಾಜೇಶ್ ,ನವೀನ್ ಕೆನ್ಯುಟ್ ಲೋಬೊ,ಎಲಿಯಾಜ್ ಫೆರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದರು.

