ಮಂಜೇಶ್ವರ :ಶ್ರೀಮದ್ ಅನಂತೇಶ್ವರ ದೇವಸ್ಥಾನ ಮಂಜೇಶ್ವರ ಇದರ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದ೦ ತಿ ಹಾಗೂ ಬೆಳ್ಳಿ ಲಾಲ್ಕಿ ಯ 150 ನೇ ವರ್ಷದ ಸಂಭ್ರಮೋತ್ಸವ ಐತಿಹಾಸಿಕವಾಗಿ ಅಪೂರ್ವ ವಿಜೃಂಭಣೆಯಿಂದ ಅವಿಸ್ಮರಣೀಯವಾಗಿ ದೇವಳದ ಸ್ವಯಂ ಸೇವಕರಿಂದ ನೆರವೇರಿತು.

ಬೆಳಿಗ್ಗೆ ಬೆಳ್ಳಿ ಪಲ್ಲಕಿ ಹಗಲೋತ್ಸವ , ಮಧ್ಯಾನಃ ಸಮಾಜ ಭಾಂದವರಿಂದ ಶ್ರೀ ನರಸಿಂಹ ಸ್ತುತಿ ಪಠಣದೊಂದಿಗೆ ಪ್ರದಕ್ಷಿಣಾ ಸೇವೆ , ಸಮೃದ್ಧವಾದ ನಿರೀಕ್ಷಣಾ ವಸ್ತುಗಳು ಶ್ರೀ ದೇವರಿಗೆ ವಾದ್ಯ ಘೋಷ್ಠಿಯೊಂದಿಗೆ ಸಮರ್ಪಣೆ ಮಾಡಲಾಯಿತು . ರಾತ್ರಿ 150ನೇ ವರ್ಷದ ಬೆಳ್ಳಿ ಲಾಲಕಿಗೆ ಅಪೂರ್ವ ಅಲಂಕಾರದೊಂದಿಗೆ ಉತ್ಸವ ಹಾಗೂ ಪೂಜಾ ಸೇವೆ ,ಉತ್ಸವದಲ್ಲಿ ಅದ್ಧೂರಿ ವಾದ್ಯ ಘೋಷ , ಕಣ್ಮನ ಸಂತೈಸುವ ವಿಶೇಷ ದೀಪಾರಾಧನೆ ನೆರವೇರಿತು .ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ , ಅರ್ಚಕರು ಹಾಗೂ ಹತ್ತು ಸಮಸ್ತರು ಉಪಸ್ಥಿತರಿದ್ದರು .


ಚಿತ್ರ : ಮಂಜು ನೀರೇಶ್ವಾಲ್ಯ

