ಮಂಗಳೂರು : ಸ್ನೇಹಕ್ರಪ ಮೂವೀಸ್ ಲಾಂಛನದಲ್ಲಿ ರಾಜಾರಾಂ ಶೆಟ್ಟಿ ಉಪ್ಪಳ ನಿರ್ಮಾಣದ ಗಿರೀಶ್ ಪೂಜಾರಿಯವರ ಸಹಕಾರದೊಂದಿಗೆ ಸುಧಾಕರ್ ಬನ್ನಂಜೆಯವರು ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಬರೆದು ನಿರ್ದೇಶಿಸಿದ ತುಳು ಚಲನಚಿತ್ರ “ಗಂಟ್ ಕಲ್ವೆರ್ ” ಇದೇ ಬರುವ ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ಮತ್ತು ಮೇ 23 ರಂದು ಶುಕ್ರವಾರ ಕರ್ನಾಟಕ ರಾಜ್ಯಾದ್ಯಾಂತ ಬಿಡುಗಡೆಯಾಗಲಿದೆ.

ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ.ಚಿತ್ರಕ್ಕೆ ವಿ. ಮನೋಹರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆ.ಗಿರೀಶ್ ಕುಮಾರ್ ಅವರ ಸಂಕಲನ , ಶಂಕರ್- ರವಿಕಿಶೋರ್ ಛಾಯಾಗ್ರಹಣವಿದೆ. ಕೌರವ ವೆಂಕಟೇಶ್ ಸಾಹಸ, ತಮ್ಮ ಲಕ್ಷ್ಮಣ ಅವರ ಕಲಾನಿರ್ದೇಶನ, ಪ್ರಶಾಂತ್ ಎಳ್ಳಂಪಳ್ಳಿ ಹಾಗೂ ಶ್ರೀರಾಮ್ ಸಸಿಹಿತ್ಲು ಸಹ ನಿರ್ದೇಶನ ಈ ಚಿತ್ರಕ್ಕಿದೆ. ಮಮತಾ ಎಸ್ ಬನ್ನಂಜೆ , ಕೃತಿ.ಆರ್ ಶೆಟ್ಟಿ, ಪ್ರಾರ್ಥನ್ ಬನ್ನಂಜೆ .ಪ್ರೇರಣ್ ಬನ್ನಂಜೆ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.

ತಾರಾಗಣದಲ್ಲಿ ನವೀನ್ ಪಡೀಲ್,ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಅಥರ್ವ ಪ್ರಕಾಶ್, ಉಮೇಶ್ ಮಿಜಾರು, ಸುಂದರ ರೈ ಮಂದಾರ, ಸಂದೀಪ್ ಶೆಟ್ಟಿ ಮಾಣಿಬೆಟ್ಟು,,ಶ್ರೀಕಾಂತ ರೈ,ಪ್ರಣವ್ ಹೆಗ್ಡೆ ,ಶೈಲೇಶ್ ಕೋಟ್ಯಾನ್,ಆರ್ಯನ್ ಶೆಟ್ಡಿ, ಸ್ಮಿತಾ ಸುವರ್ಣ,ಸುಧೀರ್ ಕೊಠಾರಿ,ಗಿರೀಶ್ ಶೆಟ್ಟಿ ಕಟೀಲು ,ರವಿ ಸುರತ್ಕಲ್, ಯಾದವ ಮಣ್ಣಗುಡ್ಡೆ ,ಪ್ರದೀಪ್ ಆಳ್ವ , ಮಂಗೇಶ್ ಭಟ್ ವಿಟ್ಲ, ಜೀವನ್ ಉಲ್ಲಾಳ್,ಚೇತಕ್ ಪೂಜಾರಿ,ಮೋಹನ್ ಕೊಪ್ಪಳ, ಸಂಚಿತ, ಮೈತ್ರಿ, ದಿಶಾ , ನಮಿತಾ, ಸಿಂಚನಾ ಉಷಾ ಫೆರ್ನಾಂಡಿಸ್ ಮೋನಿಕಾ ಅಂದ್ರಾದೆ,ಪ್ರೇರಣ್ ಸುಮಾಲಿನಿ , ಮಾ.ಪದ್ಮನಾಭ್ ,ನಿಧಿ,ಸಮೃದ್ದಿ ಮೊದಲಾದವರು ಅಭಿನಯಿಸಿದ್ದಾರೆ.

