ಐ.ಸಿ.ಸಿ. ಕತಾರ್,ಮುಂಬೈ ಹಾಲ್ ನಲ್ಲಿ ನಡೆದ ಬಿಲ್ಲವಾಸ್ ಕತಾರ್ ನ ಕಾರ್ಯಕಾರಿ ಮತ್ತು ಸಲಹಾ ಮಂಡಳಿಯ ಸಭೆಯಲ್ಲಿ ಪ್ರಸ್ತುತ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಅಪರ್ಣ ಶರತ್ ಅವರನ್ನು ಬಿಲ್ಲವಾಸ್ ಕತಾರ್ ನ ಅಧ್ಯಕ್ಷೆಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಶ್ರೀಮತಿ ಅಪರ್ಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಡ್ಯಾರ್ ನ ನಿವಾಸಿಯಾಗಿದ್ದು, ಎಂ.ಬಿ.ಎ. (ಮಾನವ ಸಂಪನ್ಮೂಲ) ಪದವಿಯನ್ನು ಹೊಂದಿದ್ದಾರೆ. ಅವರು ಕತಾರ್ ನ ಸುಪ್ರಸಿದ್ದ ಕಂಪೆನಿಗಳಲ್ಲಿ ಒಂದಾದ ಗಲ್ಫಾರ್ ಅಲ್ ಮಿಸ್ನಾಡ್ ನಲ್ಲಿ ಮಾನವ ಸಂಪನ್ಮೂಲ ವಿಭಾಗೀಯ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.



