ಸುರತ್ಕಲ್ : ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುರತ್ಕಲ್ ಇದರ ಪಶ್ಚಿಮ ಬದಿಯ ” ಪುಷ್ಕರಣಿ ” ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರರು ಪ್ರಧಾನ ಅರ್ಚಕರು, ವೇ! ಮೂ! ಐ.ರಮಾನಂದ ಭಟ್ ಅವರ ಅಮ್ರತಾ ಹಸ್ತದಿಂದ ಪುಷ್ಕರಣಿ ಅಭಿವೃದ್ಧಿ ಮನವಿ ಪತ್ರವನ್ನು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೇವತಾ ಪ್ರಾರ್ಥನೆಯೊಂದಿಗೆ ಬಿಡುಗಡೆಗೊಳಿಸ ಲಾಯಿತು.
ಇತಿಹಾಸ ಪ್ರಸಿದ್ಧ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಶ್ಚಿಮದಲ್ಲಿರುವ ಪುಷ್ಕರಣಿಯನ್ನು ಜೀರ್ಣೋದ್ಧಾರಗೊಳಿಸಲು ಸರ್ವ ಭಕ್ತರು ಸಹಕರಿಸುವಂತೆ ಮನವಿ ಮಾಡಿದರು.ಸಾಧಾರಣ 15 ಲಕ್ಷ ಅಂದಾಜು ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿ ಮಾಡಲಾಗು ವುದು.ಇಡ್ಯಾ ಶ್ರೀ ಮಹಾ ಗಣಪತಿ ಮಹಾಲಿಂಗೇಶ್ವರ ದೇವರು ಧರ್ಮ ದೇವತೆ ,ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಆಶೀರ್ವಾದದಲ್ಲಿ ಶೀಘ್ರವಾಗಿ ಕೆರೆಯ ಕೆಲಸ ಪೂರ್ಣಗೊಳ್ಳಲಿದೆ ಎಂದು ಹಾರೈಸಿದರು.

ಈ ಸಂಧರ್ಭದಲ್ಲಿ ಪುಷ್ಕರಣಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ರಾವ್ ಇಡ್ಯಾ,ಧಾರ್ಮಿಕ ಮುಂದಾಳು ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಂಡಲೀಕ ಹೊಸಬೆಟ್ಟು, ಪ್ರಧಾನ ಕೋಶಾಧಿಕಾರಿ ಕೆ.ರಾಜಮೋಹನ್ ರಾವ್,ಗೌರವ ಸಲಹೆಗಾರ ಕ್ರಷ್ಣ ಕುಮಾರ್ ಇಡ್ಯಾ, ಸಂಚಾಲಕರಾದ ಐ.ಶಂಕರನಾರಾಯಣ ಭಟ್,ಐ.ಸೂರ್ಯನಾರಾಯಣ ಭಟ್,ಹಾಗೂ ಸಮಿತಿಯ ಸದಸ್ಯರಾದ ಜಯಪ್ರಕಾಶ್ ರಾವ್ ಇಡ್ಯಾ, ವಸಂತ್ ಕುಮಾರ್ ನಾಯಕ್,ಉದಯಶಂಕರ್ ಭಟ್ ಇಡ್ಯಾ ಉಪಸ್ಥಿತರಿದ್ದರು.


