ಮಂಗಳೂರು: ಇಸ್ಕಾನ್ ಮಂಗಳೂರಿನ ಶ್ರೀ ಕೃಷ್ಣ ಬಲರಾಮ ಮಂದಿರ, ಪಿವಿಎಸ್ ಕಲಾಕುಂಜ ಕಟ್ಟಡ ಕೋಡಿಯಾಲ್ ಬೈಲ್ನಲ್ಲಿ ಕಾರ್ಯಚರಿಸುತ್ತಿರುವ ಇಸ್ಕಾನ್ ಧಾರ್ಮಿಕ ಸಂಸ್ಥೆಯು ರಾಮನವಮಿ ಮತ್ತು ಶ್ರೀ ಕೃಷ್ಣ ಬಲರಾಮ ಶೋಭಾ ಯಾತ್ರಾ ಮಹೋತ್ಸವವನ್ನು ಎಪ್ರಿಲ್ 6 ಭಾನುವಾರದಂದು ಸಂಜೆ 4:30 ಗಂಟೆಗೆ ಇಸ್ಕಾನ್ ಮಂದಿರದಲ್ಲಿ ರಾಮನವಮಿ ಉತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು ಅಂದು ಶ್ರೀ ಕ್ರಷ್ಣ ಬಲರಾಮರಿಗೆ ಶ್ರೀರಾಮ ಲಕ್ಷ್ಮಣರ ಅಲಂಕಾರ ಮಾಡಿ ರಾಮನವಮಿ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬವನ್ನು ಇಸ್ಕಾನ್ ದೇವಸ್ಥಾನದಿಂದ ಪ್ರಾರಂಭಿಸಿ ಶಾರದಾ ಹೈಸ್ಕೂಲ್ ಮೈದಾನದಲ್ಲಿ ಮುಂದುವರಿಸಲಾಗು ತ್ತದೆ.ಎಂದು ಸಂಸ್ಥೆಯ ಅಧ್ಯಕ್ಷರಾದ ಗುಣಾಕರ ರಾಮದಾಸ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಪವಿತ್ರ ಹಬ್ಬವು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಮತ್ತು ಬಲರಾಮ ಅವರ ಪವಿತ್ರ ಯಾತ್ರೆಯನ್ನು ಸ್ಮರಿಸುತ್ತದೆ. ಅವರು ಮಥುರೆಯ ವೃಂದಾವನದ ಬೀದಿಗಳಲ್ಲಿ ತಮ್ಮ ಭಕ್ತರಿಗೆ ಆಶೀರ್ವಾದ ನೀಡಲು ರಥಯಾತ್ರೆ ಕೈಗೊಂಡಿದ್ದರು. ಈ ಶೋಭಾ ಯಾತ್ರೆ ಆ ಪವಿತ್ರ ಘಟನೆಯನ್ನು ಪುನರಾವರ್ತಿಸಿ, ಭಕ್ತರ ಹೃದಯಗಳಲ್ಲಿ ದೇವರನ್ನು ಪ್ರವೇಶಿಸುವ ಸಂಕೇತವಾಗಿದೆ ತಿಳಿಸಿದರು.

ಅಂದು ಸಂಜೆ 4:30 ಕ್ಕೆ ದೇವಾಲಯದ ಹಾಲ್ನಲ್ಲಿ ಆರಂಭಿಕ ವಿಶೇಷ ಪೂಜೆ ಮೂಲಕ ಹಬ್ಬದ ಪ್ರಾರಂಭವಾಗುತ್ತದೆ. ನಂತರ ಶೋಭಾಯಾತ್ರೆ ಪ್ರಾರಂಭವಾಗುತ್ತದೆ. ಪವಿತ್ರ ರಥದಲ್ಲಿ ಶ್ರೀ ಕೃಷ್ಣ ಮತ್ತು ಬಲರಾಮರ ಪ್ರತಿಮೆಗಳೊಂದಿಗೆ ಅದ್ಭುತವಾಗಿ ಆಲಂಕರಿಸಲಾದ ರಥವನ್ನು ಮೆರವಣಿಗೆ ಮೂಲಕ ಸಾಗಿಸಲಾಗುತ್ತದೆ. ಶೋಭಾ ಯಾತ್ರೆಯು ಬೆಸೆಂಟ್ ಶಾಲಾ ರಸ್ತೆ, ಎಂ.ಜಿ. ರಸ್ತೆ, ಪಿವಿಎಸ್ ವ್ರತ್ತ, ನವಭಾರತ ವೃತ್ತ ರಸ್ತೆಗಳ ಮೂಲಕ ಸಾಗುತ್ತಾ ಹರೇ ಕೃಷ್ಣ ಹರೇ ರಾಮಾ ಮಹಾ ಮಂತ್ರದ ಜಪದಿಂದ ಅಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುತ್ತದೆ.
ರಾಮ,ಲಕ್ಷ್ಮಣ, ಸೀತಾ ಮತ್ತು ಹನುಮಾನ್ ವೇಷಾಧಾರಿ ಮಕ್ಕಳು ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಬ್ಬಕ್ಕೆ ಮತ್ತಷ್ಟು ಹಿರಿಮೆ ಸೇರ್ಪಡೆಗೊಳ್ಳುತ್ತದೆ.
ಸಂಜೆ ಶಾರದಾ ಶಾಲೆಯ ಮೈದಾನದಲ್ಲಿ ನ್ರತ್ಯ,ಸಂಗೀತ, ನಾಟಕ ,ಭಜನೆ, ಕೀರ್ತನೆ,ಧಾರ್ಮಿಕ ಪ್ರವನ ಕಾರ್ಯಕ್ರಮಗಳು ಜರಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸುಂದರಗೌರ ದಾಸ,ಸನಂದನ ದಾಸ ,ಎಂ.ವಿ.ಮಲ್ಯ ಉಪಸ್ಥಿತರಿದ್ದರು.
ಚಿತ್ರ: ಸತೀಶ್ ಕಾಪಿಕಾಡ್


