ಸ್ಯಾಂಡಲ್ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುವ ಕಾಂತಾರ -1 ಸಿನೆಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು ಅಕ್ಟೋಬರ್ 2 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಲನಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.ಇದೆಲ್ಲದರ ನಡುವೆ ರಿಷಬ್ ಶೆಟ್ಟಿ ನಿನ್ನೆ ನಡುರಾತ್ರಿ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ದಂಪತಿ ಸಮೇತ ಪಾಲ್ಗೊಂಡಿದ್ದಾರೆ

ಕಾಂತಾರ ಚಾಪ್ಟರ್ 1ಚಿತ್ರಕ್ಕೆ ಎದುರಾಗುತ್ತಿರುವ ವಿಘ್ನಗಳಿಗೆ ಸಂಬಂಧಿಸಿ ಮಂಗಳೂರಿನಲ್ಲಿ ನಡೆದ ನೇಮವೊಂದರಲ್ಲಿ ದೈವದ ಬಳಿ ರಿಷಭ್ ಶೆಟ್ಟಿಯವರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ನಡುರಾತ್ರಿ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವಕ್ಕೆ ಬಂದ ರಿಷಭ್ ಶೆಟ್ಟಿ ರಾತ್ರಿ 11 ಗಂಟೆಯಿಂದ ನಸುಕಿನ 4 ಗಂಟೆ ವರೆಗೂ ದೈವದ ಉತ್ಸವದಲ್ಲಿ ಭಾಗಿಯಾಗಿದ್ದಾರೆ.
ಈ ನೇಮೋತ್ಸವದ ಕೊನೆಯಲ್ಲಿ ತಮ್ಮ ಜೀವನದಲ್ಲಿ ಈಗ ಎದುರಾಗಿರುವ ಕಷ್ಟವನ್ನು ವಾರಾಹಿ ಪಂಜುರ್ಲಿ ದೈವದ ಮುಂದೆ ಹೇಳಿಕೊಂಡಿದ್ದಾರೆ.

ತನ್ನ ನೋವು ತೋಡಿಕೊಂಡ ಭಕ್ತನನ್ನು ಸಂತೈಸಿದ ದೈವ ಕೆಲವೊಂದು ಸೂಕ್ಷ್ಮವಾದ ವಿಚಾರವನ್ನು ತಿಳಿಸಿ ರಿಷಬ್ ಶೆಟ್ಟಿಗೆ ಎಚ್ಚರಿಕೆಯನ್ನು ಸಹ ನೀಡಿದೆ
ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್ ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ? ನೀನು ನಂಬಿದ ದೈವ ಕೈಬಿಡಲ್ಲ ಎಂದು ದೈವ ಆಶ್ವಾಸನೆ ನೀಡಿದೆ.
ಯಾರೋ ನಿನಗೆ ಕೇಡು ಬಗೆದಿದ್ದಾರೆ, ಅವರು ಯಾರೆಂದು ನಾನು ಹೇಳಲ್ಲ, ನಿನಗೆ ಕೇಡು ಆಗದಂತೆ ನೋಡಿಕೊಳ್ಳುವೆ, ನನಗೆ ಸೇವೆ ನೀಡುವ ಹರಕೆ ಹೇಳಿಕೋ 5 ತಿಂಗಳಲ್ಲಿ ಒಳ್ಳೆದು ಮಾಡುತ್ತೇನೆ ಎಂದು ಅಭಯ ನೀಡಿದೆ. ಈ ಮೂಲಕ ಕೈಮುಗಿದು ಬೇಡಿಕೊಂಡ ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವ ನಿನ್ನೊಂದಿಗೆ ನಾನೀದ್ದೇನೆ ಯಾವುದಕ್ಕೂ ಭಯ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದೆ.



