ಚಿಕ್ಕಬಳ್ಳಾಪುರ : ಒಂದೇ ಗ್ರಾಮದ ಹಿಂದೂ ಯುವಕ ಹಾಗೂ ಮುಸ್ಲಿಂ ಧರ್ಮದ ಯುವತಿ ಪರಸ್ಪರ ಪ್ರೀತಿಸಿ ಪ್ರೇಮವಿವಾಹವಾಗಿ ಇದೀಗ ವಧುವು ವರನಿಗೆ ಕೈಕೊಟ್ಟು ಓಡಿಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿ ಗ್ರಾಮದ ಬೇರೆ ಬೇರೆ ಧರ್ಮದ ಯುವಕ ಮತ್ತು ಯುವತಿಯರಾದ ನಾಗಾರ್ಜುನ ಹಾಗೂ ಫಸಿಯಾ ಎಂಬುವವರು ಕಳೆದ 2 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.ಮದುವೆಗೆ ಯುವತಿ ಪೋಷಕರ ವಿರೋಧದಿಂದ ಮನೆಯಿಂದ ಓಡಿ ಹೋಗಿ ಮಾರ್ಚ್ 24ರಂದು ಪ್ರೇಮ ವಿವಾಹವಾಗಿದ್ದಾರೆ. ಮುಂದೆ ವಧುವಿನ ಕಡೆಯವರು ಜಗಳ ಮಾಡುವರೆಂದು ಹೆದರಿ ಸೀದಾ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ತಮಗೆ ರಕ್ಷಣೆ ಕೊಡುವಂತೆ ಕೋರಿಕೊಂಡಿದ್ದಾರೆ.ಆಗ ಪೋಲಿಸರು ಎರಡೂ ಕಡೆಯವರ ತಂದೆ-ತಾಯಿ ಹಾಗೂ ಬಂಧು ಬಳಗದವರನ್ನು ಕರೆಸಿ ಯುವತಿಯ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿ ತಾನು ಇಷ್ಟಪಟ್ಟೇ ಮದುವೆಯಾಗಿದ್ದು ನಾಗಾರ್ಜುನನ ಜೊತೆಯಲ್ಲೇ ಜೀವನ ಮಾಡುವುದಾಗಿ ತಿಳಿಸಿದ್ದಾಳೆ.ಯುವತಿ ಹೇಳಿಕೆ ಬಳಿಕ ನೂತನ ದಂಪತಿಗೆ ರಕ್ಷಣೆ ನೀಡಿ ಪೊಲೀಸರು ವರನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಆದ್ರೆ ಇದೀಗ ಮದುವೆಯಾಗಿ 15 ದಿನ ಕಳೆಯೊದರೊಳಗೆ ಯುವತಿ ಫಸಿಹಾ ತಾಯಿ ಮನೆ ಸೇರಿಕೊಂಡಿದ್ದಾಳೆ.ತನ್ನ ತಾಯಿಗೆ ಅನಾರೋಗ್ಯ ಇದೆ. ನನ್ನ ನೋವಲ್ಲೇ ಕೊರಗಿ ಅವರು ಹಾಸಿಗೆ ಹಿಡಿದಿದ್ದಾರೆ.ಎನ್ನುವ ಕಾರಣ ನೀಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟು ತಾಯಿ ಮನೆಗೆ ವಾಪಸಾಗಿದ್ದಾಳೆ.
ಇದೀಗ ನಾಗಾರ್ಜುನನನ್ನು ಸಂಸಾರ ಎನ್ನುವ ಸಾಗರದ ನಡು ನೀರಿನಲ್ಲೇ ಬಿಟ್ಟು ತವರಿಗೆ ವಾಪಸ್ ಹೋಗಿದ್ದಾಳೆ. ಇದರಿಂದ ಫಸಿಯಾಳನ್ನು ನಂಬಿ ಹೋಗಿದ್ದ ನಾಗಾರ್ಜುನ ಈಗ ಕಂಗಾಲಾಗಿದ್ದಾನೆ.

