ಮಂಗಳೂರು : ಕುಲಾಲ ಸಂಘ ಮಂಗಳೂರು ವತಿಯಿಂದ ಎಪ್ರಿಲ್ 13 ರಂದು ರವಿವಾರ ಮಧ್ಯಾಹ್ನ 2 ಗಂಟೆಗೆ ಮಂಗಳೂರಿನ ಉರ್ವಸ್ಟೋರಿನಲ್ಲಿರುವ ಅಂಬೇಡ್ಕರ್ ಭವನದಲ್ಲಿ” ಕುಲಾಲ ಪರ್ಬ ” ಕಾರ್ಯಕ್ರಮವು ಜರಗಲಿದೆ ಎಂದು ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಂದು ಮಧ್ಯಾಹ್ನ 2 ಗಂಟೆಗೆ ದಿ| ಸುಮಿತ್ರ ರಾಜು ಸಾಲ್ಯಾನ್ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ನೆರವೇರಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಶ್ರೀ ಶಿವಾನಂದ ಕಾನಡ,ಪ್ರಧಾನ ಅರ್ಚಕರು ,ಶ್ರೀ ಮಾರಿಯಮ್ಮ ದೇವಸ್ಥಾನ, ಉರ್ವ.ಶ್ರೀ ಎಂ.ಪಿ ಬಂಗೇರ,ಶ್ರೀಮತಿ ಮಮತಾ ಅಣ್ಣಯ್ಯ ಕುಲಾಲ್,ಶ್ರೀ ಸದಾಶಿವ ಕುಲಾಲ್,ಅತ್ತಾವರ,ಶ್ರೀ ರಾಮ್ ಪ್ರಸಾದ್ ಎಸ್,ನ್ಯಾಯವಾದಿ, ಮಂಗಳೂರು. ಶ್ರೀ ಗಂಗಾಧರ ಬಂಜನ್, ಶ್ರೀ ರವೀಂದ್ರ ಮುನ್ನಿಪ್ಪಾಡಿ ನ್ಯಾಯವಾದಿ, ಮಂಜೇಶ್ವರ,ಶ್ರೀ ನಾಗೇಶ್ ಕುಲಾಲ್,ಶ್ರೀ ಕುಶ.ಆರ್ ಮೂಲ್ಯ,ಶ್ರೀ ಕಿರಣ್ ಅಟ್ಲೂರು ಮುಂತಾದವರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2:30 ರಿಂದ ನ್ರತ್ಯ- ಸಂಗೀತ- ಸನ್ಮಾನ ಕಾರ್ಯಕ್ರಮ ಅಲ್ಲದೆ ಕುಲಾಲ ಸಮಾಜದ 25 ಸಾಧಕರಿಗೆ ಕುಲಾಲ ಸಾಧಕ ಪ್ರಶಸ್ತಿ ಪ್ರಧಾನ ಮಾಡಲಿದ್ದೇವೆ.
ಸಂಜೆ 6:30 ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ . ಶ್ರೀ ವಿಜಯ ಸುವರ್ಣ ಮಾದುಕೋಡಿ ಇವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಸುರೇಶ್ ಕುಲಾಲ್ ಮಂಗಳಾದೇವಿ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಗೌರವ ಅತಿಥಿಗಳಾಗಿ ಶ್ರೀ ಐಕಳ ಹರೀಶ್ ಶೆಟ್ಟಿ,ಶ್ರೀ ಸದಾಶಿವ ಶೆಟ್ಟಿ ಕನ್ಯಾನ,ಶ್ರೀ ಶಶಿಧರ ಶೆಟ್ಟಿ ಬರೋಡ,ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಶ್ರೀ ವಿ.ಕರುಣಾಕರ್,ಶ್ರೀ ಮೋಹನ್ ಪೂಜಾರಿ, ಶ್ರೀ ಮಯೂರ್ ಉಳ್ಳಾಲ್,ಶ್ರೀ ರಘ ಮೂಲ್ಯ ಪಾದೆಬೆಟ್ಟು,ಶ್ರೀಮತಿ ಕಸ್ತೂರಿ ಪಂಜ,ಶ್ರೀ ಸುಂದರ್ ಕುಲಾಲ್ ಶಕ್ತಿನಗರ,ಶ್ರೀ ಎ.ದಾಮೋದರ್,ಡಾ.ಸುರೇಖ ರತನ್ ಕುಲಾಲ್,ಶ್ರೀ ಜಗದೀಶ್ ಬಂಜನ್ ಶ್ರೀ ಲೋಕನಾಥ್ ಶೆಟ್ಟಿ, ಶ್ರೀ ಗುರುದತ್ ಶೆಣೈ,ಶ್ರೀ ಗಿರೀಶ್ ಸಾಲ್ಯಾನ್,ಶ್ರೀ ರಮಾನಂದ ಬಂಗೇರ,ಶ್ರೀ ಶಶಿಧರ್ ಹೆಗ್ಡೆ,ಶ್ರೀ ದಿವಾಕರ್ ಮೂಲ ಮುಂತಾದವರು ಭಾಗವಹಿಸಲಿದ್ದಾರೆ.

ಅಲ್ಲದೆ ಸಭಾ ಕಾರ್ಯಕ್ರಮದ ನಂತರ ನಾಗೇಶ್ ಕುಲಾಲ್ ಸಾರಥ್ಯದಲ್ಲಿ’ ಮಣ್ಣಾ ಬಾಜನ ‘ ಕಿರು ನಾಟಕ ಹಾಗೂ ಸೀತಾರಾಮ ಕುಲಾಲ್ ಮತ್ತು ತಂಡದವರಿಂದ ತಾಲೀಮು ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಊರ ಪರವೂರ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿ ಬಿ. ಪ್ರೇಮಾನಂದ ಕುಲಾಲ್, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ , ಟ್ರಸ್ಟಿಗಳಾದ ಬಿ. ನಾಗೇಶ್ ಕುಲಾಲ್, ಬಿ. ದಿನೇಶ್ ಕುಲಾಲ್ ಉಪಸ್ಥಿತರಿದ್ದರು.

