ಬೆಂಗಳೂರು : ಬ್ಯಾಂಕ್ ಜನಾರ್ಧನ್ ಎಂದೇ ಜನಪ್ರಿಯರಾಗಿದ್ದ ಕನ್ನಡದ ಹಿರಿಯ ನಟ ಜನಾರ್ಧನ್ ಅವರು ಸೋಮವಾರ ಬೆಳ್ಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಜನಾರ್ಧನ್ ಅವರ ಪುತ್ರ ಗುರುಪ್ರಸಾದ್ ಅವರ ಪ್ರಕಾರ, ನಟ ಜನಾರ್ಧನ್ ಅವರು ಬೆಳಗಿನ ಜಾವ 2.30 ರ ಸುಮಾರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿ ರೆಳೆದರು. ಜನಾರ್ದನ ಅವರು ಕೆಲವು ಸಮಯದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಬ್ಯಾಂಕ್ ಉದ್ಯೋಗಿಯಾಗಿದ್ದ ಜನಾರ್ಧನ್ ತಮ್ಮ ಆದಾಯಕ್ಕೆ ಪೂರಕವಾಗಿ ನಟನೆಯನ್ನು ಆರಿಸಿಕೊಂಡರು. ನಾಲ್ಕು ದಶಕಗಳ ವೃತ್ತಿಜೀವನದಲ್ಲಿ 500 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಅವರು, ‘ಬ್ಯಾಂಕ್’ ಎಂಬ ಪೂರ್ವಪ್ರತ್ಯಯವನ್ನು ಪಡೆದರು ಮತ್ತು ಬ್ಯಾಂಕ್ ಜನಾರ್ಧನ್ ಎಂದೇ ಜನಪ್ರಿಯರಾಗಿದ್ದರು.
1948 ರಲ್ಲಿ ಚಿತ್ರದುರ್ಗದ ಹೊಳಲ್ಕೇರೆಯಲ್ಲಿ ಜನಿಸಿದ ಅವರು ನಂತರ ಉದ್ಯೋಗ ನಿಮಿತ್ತ ಬೆಂಗಳೂರಿನ ಸುಲ್ತಾನಪಾಳ್ಯದಲ್ಲಿ ನೆಲೆಸಿದ್ದರು. ಬ್ಯಾಂಕ್ ಜನಾರ್ದನ್ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡರು.

ಅವರು 1985 ರಲ್ಲಿ ‘ಪಿತಾಮಹ’ ಎಂಬ ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಅವರು ಹೆಚ್ಚಾಗಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದರು ಜಗ್ಗೇಶ್ ಹಾಗೂ ಕಾಶಿನಾಥ್ ಅವರ ಚಿತ್ರಗಳಲ್ಲಿ ಅವರು ಖಾಯಂ ನಟರಾಗಿದ್ದರು ಅಲ್ಲದೆ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ,ಅಜಗಜಾಂತರ, ಊರಿಗೆ ಉಪಕಾರಿ, ಗಣೇಶ್ ಸುಬ್ರಹ್ಮಣ್ಯ,ಬೆಟ್ಟದ ತಾಯಿ, ಪೋಲಿಸನ ಹೆಂಡ್ತಿ ಮುಂತಾದ ಸೂಪರ್ ಹಿಟ್ ಚಿತ್ರಗಳು ಅಲ್ಲದೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರು.
2023ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

