ದುಬೈ : ಇಂದು ಸಂಜೆ ಉದ್ಘಾಟನೆಗೆ ಸಜ್ಜುಗೊಂಡಿರುವ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ನೂತನ ಶಾಖೆ “ದಿ ಬೋಟ್ ಮ್ಯಾನ್ ಹಬ್” ರೆಸ್ಟೋರೆಂಟ್ ಗೆ ಪ್ರಮುಖ ದುಬೈಯ ಸೇಂಟ್ ಮೇರಿ ಕ್ಯಾಥೋಲಿಕ್ ಚರ್ಚ್ ನ ಗೌರವಾನ್ವಿತ ಗುರುಗಳಾದ ಫಾ.ಮೈಕೆಲ್ ಕಾರ್ಡೋಜ್ ರವರು ಬೇಟಿ ನೀಡಿದರು.


ಈ ಸಂದರ್ಭದಲ್ಲಿ ಫಾದರ್ ರೆಸ್ಟೋರೆಂಟ್ ಯಶಸ್ವಿಯಾಗಿ ಮುಂದೆ ಸಾಗಲಿ ಎಂದು ಶುಭ ಹಾರೈಸಿ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಪ್ರಾರ್ಥನೆಯೊಂದಿಗೆ ಆರ್ಶೀವಾದವನ್ನು ಮಾಡಿದರು.


ನಂತರ ಫಾದರ್ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರೊಂದಿಗೆ ರೆಸ್ಟೋರೆಂಟ್ ನ ಮೊದಲ ಆತಿಥ್ಯದ ಭೋಜನವನ್ನು ಸವಿದರು.ಈ ಉದ್ಘಾಟನಾ ಭೋಜನದಲ್ಲಿ ಹೋಟೆಲ್ಸ್ ನ ಎಲ್ಲಾ ಸಿಬ್ಬಂದಿ ಸದಸ್ಯರು ಸೇರಿಕೊಂಡರು.
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)




