ಮಂಗಳೂರು : ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ನಿರ್ಮಾಣದ ,ರಮೇಶ್ ಶೆಟ್ಟಿಗಾರ್ ಕಥೆ ಬರೆದ ಪಿದಾಯಿ ತುಳು ಚಲನಚಿತ್ರ ಮೇ 9 ರಂದು ಕರಾವಳಿಯಾದ್ಯಾಂತ ಸುಮಾರು16 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕರಾದ ಸಂತೋಷ್ ಮಾಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈಗಾಗಲೇ ಪಿದಾಯಿ ಚಿತ್ರವು ಸಿಮ್ಲಾ,ಕೊಲ್ಕತ್ತಾ, ಜಾರ್ಖಂಡ್, ಹಾಗೂ ಕ್ಯಾಲಿಫೋರ್ನಿಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆಯಾಗುವುದರ ಜೊತೆಗೆ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮಬಾರಿಗೆ ತುಳು ಚಿತ್ರವೊಂದು ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ಹೀಗೆ ಎರಡೂ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿದ್ದು ಅಂತಿಮವಾಗಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿದೆ ಎಂದರು.

ನಂತರ ಮಾತನಾಡಿದ ನಟ ಶರತ್ ಲೋಹಿತಾಶ್ವ ಇದು ನನ್ನ ಎರಡನೇ ತುಳು ಚಲನಚಿತ್ರ ಮೊದಲು ಅಂಬರ್ ಕೆಟರರ್ಸ್ ಎಂಬ ತುಳು ಚಲನಚಿತ್ರದಲ್ಲಿ ಅಭಿನಯಿಸಿದ್ದೆ. ಅಲ್ಲದೆ ನಾನು ಕನ್ನಡ,ತಮಿಳು, ತೆಲುಗು,ಹಾಗೂ ಮಲಯಾಳಂ ಭಾಷೆ ಸೇರಿ ಸುಮಾರು 300 ಕ್ಕೂ ಮಿಕ್ಕಿ ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ ಆದರೆ ಸಂತೋಷ್ ಮಾಡ ಅವರು ನನಗೆ ಕರೆ ಮಾಡಿ ಚಿತ್ರದ ಕಥೆ ಹೇಳಿ ಅಭಿನಯಿಸಲು ಹೇಳಿದಾಗ ತಕ್ಷಣ ಕಥೆ ಕೇಳಿ ಒಪ್ಪಿಕೊಂಡೆ ಎಂದರು .ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳ್ಳಾರು, ರೂಪಶ್ರೀ ವರ್ಕಾಡಿ, ಇಳ ವಿಟ್ಲ ,ದೇವಿ ನಾಯರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್,ತ್ರಿಷ, ದ್ರುವ,ನಿಹಾ,ಖುಷಿ,ಡಿಬಿಸಿ ಶೇಖರ್, ಅನಿತಾ ಚಂದ್ರಶೇಖರ್ ಮುಂತಾದವರು ಅಭಿನಯಿಸಿದ್ದಾರೆ.

ಈ ಸಿನಿಮಾದ ಛಾಯಾಗ್ರಹಣವನ್ನು ಉಣ್ಷಿ ಮಾಡವೂರ್ರವರು ನಿಭಾಯಿಸಿದ್ದಾರೆ. ಎರಡು ಸಲ ರಾಜ್ಯ ಪ್ರಶಸ್ತಿ ವಿಜೇತರಾಗಿ ಅತಿಹೆಚ್ಚು ಸಿನಿಮಾ ಸಂಕಲನ ಮಾಡಿರುವ ಸುರೇಶ್ ಅರಸ್ ಇವರು ಈ ಚಿತ್ರಕ್ಕೆ ಸಂಕಲನಕಾರರಾಗಿದ್ದಾರೆ ಸಂಭಾಷಣೆಯನ್ನು ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ. ಶೇಖರ್ ಬರೆದಿದ್ದಾರೆ.

ಚಿತ್ರವನ್ನು ದ.ಕ ಜಿಲ್ಲೆಯ ಮುಡಿವು ಹಾಗೂ ಮಂಜೇಶ್ವರದ ಗಡಿಪ್ರದೇಶಗಳ ಸುತ್ತಮುತ್ತ ಚಿತ್ರೀಕರಿಸಲಾಗಿದೆ.ಸಾಹಿತ್ಯ ಸುಧೀರ್ ಅತ್ತಾವರ,ಶಶಿರಾಜ್ ಕಾವೂರು ಯೋಗೀಶ್ ಅಡಕಳಕಟ್ಟೆ ಹಾಗೂ ಕುಶಾಲಾಕ್ಷಿ ಕಣ್ವತೀರ್ಥ, ಸಂಗೀತ – ಅಜಯ್ ನಂಬೂದಿರಿ ನೀಡಿದ್ದಾರೆ,ಪ್ರಸಿದ್ಧ ಶಾಸ್ತ್ರೀಯ ಗಾಯಕರಾದ ಡಾಕ್ಟರ್ ವಿದ್ಯಾಭೂಷಣ್ ಪ್ರಥಮವಾಗಿ ತುಳು ಸಿನಿಮಾದಲ್ಲಿ ಹಾಡಿದ್ದಾರೆ.ಹಿನ್ನಲೆ ಗಾಯಕರಾದ ಮೇಧಾ ವಿದ್ಯಾಭೂಷಣ್, ವಿಜೇತ್ ಗೋಪಾಲ್ ಮುಂತಾದವರು ಕಂಠದಾನ ಮಾಡಿದ್ದಾರೆ. ಹಿನ್ನಲೆ ಸಂಗೀತವನ್ನು ಕೇರಳ ರಾಜ್ಯ ಪ್ರಶಸ್ತಿ ವಿಜೇತ ಸಂಗೀತಕಾರರಾದ ದೀಪಾಂಕುರನ್ ಹಿನ್ನೆಲೆಯ ಸಂಗೀತವನ್ನು ನೀಡಿದ್ದಾರೆ.

ಚಿತ್ರದ ಕಲಾನಿರ್ದೇಶಕರಾಗಿ ರಾಜೇಶ್ ಬಂದ್ಯೋಡ್, ವಸ್ತ್ರವಿನ್ಯಾಸಕಾರರಾಗಿ ಮೀರಾ ಸಂತೋಷ್, ಮೇಕಪ್ ಮ್ಯಾನ್ ಆಗಿ ಬಿನೋಯ್ ಕೊಲ್ಲಂ, ಸಹ ನಿರ್ದೇಶನ ವಿಘ್ನೇಶ್ ಕುಲಾಲ್,ಗಿರೀಶ್ ಆಚಾರ್ ಸುಳ್ಯ,ಪ್ರದೀಪ್ ರಾವ್,ವಿಶ್ವ ಮಂಗಳ್ಪಾಡಿ,ಸ್ಥಿರ ಛಾಯಾಗ್ರಹಣ ದೀಪಕ್ ಉಪ್ಪಳ ಹಾಗೂ ತಂಡದ ಮ್ಯಾನೇಜರ್ ಆಗಿ ರವಿ ವರ್ಕಾಡಿ ಕಾರ್ಯನಿರ್ವಹಿಸಿದ್ದಾರೆ.

