ಮಂಗಳೂರು : ಮಾಜಿ ಕೇಂದ್ರ ಸಚಿವರು ,ಸಾಲಮೇಳದ ರೂವಾರಿ , ಸಾಮಾಜಿಕ ಕ್ರಾಂತಿಗಳ ಹರಿಕಾರ , ಸಂಸ್ಕೃತಿಕ ರಾಯಭಾರಿ , ಬಡವರ ಆಶಾಕಿರಣ , ಮಂಗಳೂರು ದಸರಾದ ಪ್ರಾಮಾಣಿಕ ರಾಜಕಾರಣಿ , ಮಂಗಳೂರು ದಸರಾ ರೂವಾರಿ , ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರ , ಸತ್ಯ ,ಧರ್ಮ , ನ್ಯಾಯದ ಪ್ರತೀಕ ಸನ್ಮಾನ್ಯ ಶ್ರೀ ಬಿ.ಜನಾರ್ಧನ ಪೂಜಾರಿಯವರ ಜನ್ಮದಿನದ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಜನಾರ್ಧನ ಪೂಜಾರಿಯವರ ಹಿತೈಷಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು

ಗುರುತತ್ವ ಪರಿಪಾಲಕ ಶ್ರೀಯುತ ಬಿ.ಜನಾರ್ಧನ ಪೂಜಾರಿಯವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉತ್ತಮ ಆಯುರಾರೋಗ್ಯ , ಸುಖ , ಶಾಂತಿ , ನೆಮ್ಮದಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸಲಾಯಿತು

ಈ ಸಂಧರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಪದ್ಮನಾಭ ಅಮೀನ್ , ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್, ಶ್ರೀದೇವಿ ಭಟ್ ಮುಂಬೈ ,ಟಿಸಿ ಗಣೇಶ್ , ರವಿ ಪೂಜಾರಿ ಉರ್ವಾ , ಕೃಷ್ಣ ಕುಮಾರ್ , ನೀತು ಶರಣ್ , ರಾಜೇಶ್ ದೇವಾಡಿಗ , ಪ್ರಥ್ವಿ ಸಾಲಿಯಾನ್ , ಸೀತಾರಾಮ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು

