ದುಬೈ : ಕನ್ನಡಿಗರ ಕೂಟ ದುಬೈ ಇದರ ವತಿಯಿಂದ ಅಧ್ಯಕ್ಷರಾದ ಅರುಣ್ ಕುಮಾರ್ ಎಂಕೆ ನೇತೃತ್ವದಲ್ಲಿ ಇತ್ತೀಚಿಗೆ ನಡೆದ ಸಮಿತಿ ಸಭೆಯಲ್ಲಿ 2025-26ರ ಸಾಲಿನ ಇತರ ಸಾಮಾಜಿಕ ಕಾರ್ಯಗಳನ್ನು ಅನುಸರಿಸಿ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಖಚಿತ ದಿನಾಂಕದ ಜೊತೆಗೆ ಮೇ 31 ರಂದು ಸಂಗೀತ ಸೌರಭ ಮತ್ತು ನವೆಂಬರ್ 8- 2025 ರಂದು ಕರ್ನಾಟಕ ರಾಜ್ಯೋತ್ಸವ – 2025 ಆಚರಿಸುವುದಾಗಿ ಅಧಿಕೃತಗೊಳಿಸಲಾಯಿತು.

ಅಲ್ಲದೆ ರಕ್ತದಾನ ಶಿಬಿರ, ಯುಗಾದಿ ಆಚರಣೆ,ಇಫ್ತಾರ್ ಕೂಟ,ದುಬೈನ ಕಾರ್ಮಿಕ ಶಿಬಿರದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ,ಉಚಿತ ಆರೋಗ್ಯ ತಪಾಸಣೆ,ಹುಟ್ಟೂರ ಸನ್ಮಾನ (ತವರೂರಿನ ಸಾಧಕರನ್ನು ಸನ್ಮಾನಿಸುವುದು) ಕ್ರೀಡಾ ದಿನಾಚರಣೆಯಂತಹ ಇತರ ಸಾಮಾಜಿಕ ಕಾರ್ಯಕ್ರಮಗಳ ಕುರಿತು ದುಬೈನಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ವಿನೀತ್ ರಾಜ್,ಮುಖ್ಯ ಸಲಹೆಗಾರ ಸದನ್ ದಾಸ್,ಸಲಹೆಗಾರರಾದ ಶ್ರೀಮತಿ ಉಮಾ ವಿದ್ಯಾಧರ್,ವೀರೇಂದ್ರ ಬಾಬು, ಇಬ್ರಾಹಿಂ ಖಲೀಲ್,ಛಾಯಾ ಕೃಷ್ಣ ಮೂರ್ತಿ,ಮಂಜುನಾಥ್ ರಾಜನ್,ಪ್ರಧಾನ ಕಾರ್ಯದರ್ಶಿ ಚೇತನ್ ಸುಬ್ರಹ್ಮಣ್ಯ,ಹಿರಿಯ ಸದಸ್ಯ ಮತ್ತು ಗಲ್ಫ್ ಮೂವೀಸ್ ಸಂಸ್ಥಾಪಕ ದೀಪಕ್ ಸೋಮಶೇಖರ್,ಸಮಿತಿಯ ಸದಸ್ಯರಾದ ಶ್ರೀನಿವಾಸ್ ಅರಸ್ ಮತ್ತು ವೆಂಕಟರಮಣ ಕಾಮತ್ ಉಪಸ್ಥಿತರಿದ್ದರು.
ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ ಮುಂಬರುವ ಕಾರ್ಯಕ್ರಮಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಅಲ್ಲದೆ ಈ ಮಹತ್ವದ ಸಾಂಸ್ಕೃತಿಕ ಆಚರಣೆಗಳನ್ನು ದುಬೈನಲ್ಲಿರುವ ನಮ್ಮ ಕನ್ನಡಿಗ ಸಮುದಾಯದೊಂದಿಗೆ ಆಚರಿಸುದಕ್ಕೆ ಬಹಳ ರೋಮಾಂಚನಗೊಂಡಿದ್ದೇನೆ.ಈ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ ನಮ್ಮ ಕನ್ನಡಿಗ ಕುಟುಂಬದೊಳಗಿನ ಬಾಂಧವ್ಯವನ್ನು ಬಲಪಡಿಸುತ್ತದೆ ಅಲ್ಲದೆ ದುಬೈ ಮತ್ತು ಯುಎಇಯಲ್ಲಿರುವ ಅನಿವಾಸಿ ಕನ್ನಡಿಗರ ಏಕತೆಯ ಶಕ್ತಿಯನ್ನು ತೋರಿಸಲು ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿದರು.

