ಮಂಗಳೂರು : ಸಮಾಜ ಬಾಹಿರ ಶಕ್ತಿಗಳ ವಿರುದ್ದ ಜೀವದ ಹಂಗು ತೊರೆದು ಹೋರಾಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗಳಿಸುವುದರೊಂದಿಗೆ ಪೊಲೀಸ್ ಇಲಾಖೆಗೆ ಕೀರ್ತಿ ತಂದ ದಿಟ್ಟೆದೆಯ ಪೊಲೀಸ್ ಇನ್ಸ್ ಪೆಕ್ಟ್ರಾಗಿಪೆಕ್ಟರ್ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಶ್ರೀ ಟಿ.ಡಿ ನಾಗರಾಜ್ ಪೊಲೀಸ್ ಇಲಾಖೆಗೆ ಸಂದ ಒಂದು ಶ್ರೇಷ್ಠ ವರದಾನವಾಗಿದೆ.
ಶಿವಮೊಗ್ಗ ಜಿಲ್ಲೆಯವರಾದ ನಾಗರಾಜ್ ಉಳ್ಳಾಲ,ಬಂಟ್ವಾಳ, ಪುತ್ತೂರು, ಕಾರ್ಕಳ, ಕಂಕನಾಡಿ ನಗರ ಠಾಣೆಯಲ್ಲಿ ದಿಟ್ಟೆದೆ ತೋರಿ ಸಮರ್ಥವಾದ ಕರ್ತವ್ಯ ನಿರ್ವಹಿಸಿದ ನಾಗರಾಜ್ ಉಳ್ಳಾಲ ,ಬಂಟ್ವಾಳ ಪ್ರದೇಶಗಳಲ್ಲಿ ಸಮಾಜ ಬಾಹಿರ ಶಕ್ತಿಗಳ ಹುಟ್ಟಡಗಿಸಿ ಕಂಬಿಯೊಳಗೆ ತುರುಕಿದಲ್ಲದೆ ದುಷ್ಟ ರಾಜಕಾರಣಿಗಳನ್ನು ಸಮಾಜ ಕಂಠಕರನ್ನು ದಮನಿಸಿ ಅದ್ವಿತೀಯ ದಾಖಲೆ ನಿರ್ಮಿಸಿದ ಕೀರ್ತಿ ಶ್ರೀ ಟಿ.ಡಿ ನಾಗರಾಜ್ ಅವರಿಗೆ ಸಲ್ಲಬೇಕು. ತಾನು ಸೇವೆ ಸಲ್ಲಿಸಿದ ಸ್ಥಳಗಳಲ್ಲಿ ಕೋಮು ಗಲಭೆಗಳಾಗುತ್ತಿರುವ ಸಂಧರ್ಭದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ವೀರಾವೇಶದಿಂದ ಹೋರಾಡಿ ಗಲಭೆಗಳನ್ನು ಹತ್ತಿಕ್ಕುವಲ್ಲಿ ಗೂಂಡಾಗಿರಿ ದಮನಿಸುವಲ್ಲಿ ತನ್ನ ಅಮೋಘ ಸಾಹಸವನ್ನು ಮೆರೆದ ಶ್ರೀ ಟಿ.ಡಿ ನಾಗರಾಜ್ ಇದೀಗ ಕಂಕನಾಡಿ ನಗರ ಠಾಣೆಯಲ್ಲಿ ಇನ್ ಪೆಕ್ಟರ್ ರಾಗಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿದ್ದು ಭಡ್ತಿಯ ನಿರೀಕ್ಷೆಯಲ್ಲಿದ್ದಾರೆ.
ರಾಜಕಾರಣಿಗಳ ದರ್ಪಕ್ಕೆ ಮಣಿಯದೆ ಮಧ್ಯವರ್ತಿಗಳ ಅಮೀಷಕ್ಕೆ ಒಲಿಯದೆ ಜನರೊಂದಿಗೆ ನೇರ ಸಂಪರ್ಕವಿರಿಸಿ ಕೊಂಡು ದುಷ್ಟರಿಗೆ ಸಿಂಹ ಸಪ್ನವಾಗಿ ಶಿಷ್ಟರಿಗೆ ಅಭಯ ಕೇಂದ್ರವಾಗಿ ಎಲ್ಲಾ ವರ್ಗದ ಜನರ ಮೆಚ್ಚುಗೆಗೆ ಪಾತ್ರರಾಗಿ ಮಾದರಿಯ ಪೊಲೀಸ್ ಅಧಿಕಾರಿಯಾಗಿ ಮೆರೆಯುತ್ತಿರುವ ಕಂಕನಾಡಿ ಪೊಲೀಸ್ ಇನ್ ಪೆಕ್ಟರ್ ಶ್ರೀ ಟಿ.ಡಿ ನಾಗರಾಜ್ ಅವರು ಪ್ರಗತಿಯ ಒಂದೊಂದು ಮೆಟ್ಟಲೇರಿ ಪ್ರಖೆ ಹೊಂದಲೆಂದು ನಾವು ಹಾರೈಸುತ್ತೇವೆ.
ಶೇಖ್ – ಪುತ್ತೂರು

