ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ವೈದ್ಯೆ ಅಫೀಫ ಫಾತಿಮಾ ಎಂಬಾಕೆ ತನ್ನ ಎಕ್ಸ್ ಖಾತೆಯಲ್ಲಿ ” ಕಾಪಾಡಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ. ಹೌದು ನಾನು ಭಾರತೀಯಳು, ಹೌದು ನಾನು ಭಾರತವನ್ನು ದ್ವೇಷಿಸುತ್ತೇನೆ ” ಎಂದು ಡಾ.ಆಫೀಫ ಫಾತಿಮಾ ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ಸಂದೇಶ ಪ್ರಕಟಿಸಿದ್ದಾರೆ. ಅಫೀಫ ಫಾತಿಮಾ ಪೋಸ್ಟ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಆಕೆಯನ್ನು ಹೈಲ್ಯಾಂಡ್ ಆಸ್ಪತ್ರೆ ಆಡಳಿತ ಮಂಡಳಿ ವಜಾಗೊಳಿಸಿದ್ದು ನಂತರ ಆಸ್ಪತ್ರೆಯ ಹೆಚ್ ಆರ್ ಆಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸದ್ಯ ಆಕೆಯ ವಿರುದ್ಧ ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹೈಲ್ಯಾಂಡ್ ಆಸ್ಪತ್ರೆ ಹೆಚ್ಆರ್ ಮೊಹಮ್ಮದ್ ಅಸ್ಲಾಂ ದೂರು ಆಧರಿಸಿ ಬಿಎನ್ಎಸ್ ಕಲಂ 196(1)(a), 353(2) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.


