ಬೆಂಗಳೂರು : ಪಿ.ಎ ಪ್ರೊಡಕ್ಷನ್ ಲಾಂಛನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ” ಕೊತ್ತಲವಾಡಿ” ಸಿನಿಮಾದ ಟೈಟಲ್ ಹಾಗೂ ಫಸ್ಟ್ಲುಕ್ ಪೋಸ್ಟರ್ ನ್ನು ಅಕ್ಷಯ ತ್ರತೀಯ ದಿನವಾದ ಇಂದು ಚಿತ್ರತಂಡ ಬಿಡುಗಡೆ ಮಾಡಿದೆ.

P.A production ಅಂದರೆ ಯಶ್ ಅವರ ತಂದೆ ತಾಯಿಯವರಾದ ಪುಷ್ಪಾ ಅರುಣ್ ಕುಮಾರ್ ಹೆಸರಿನಲ್ಲಿ ತಯಾರಾದ ಹೊಸ ನಿರ್ಮಾಣ ಸಂಸ್ಥೆಯಾಗಿದ್ದು ಈ ಬ್ಯಾನರ್ ಮೂಲಕ ತಮ್ಮ ಪ್ರಥಮ ಚಲನಚಿತ್ರ ಕೊತ್ತಲವಾಡಿ ಕನ್ನಡ ಚಲನಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಕರಾವಳಿಯ ಪ್ರತಿಭಾನ್ವಿತ ನಟ ಪ್ರಥ್ವಿ ಅಂಬರ್ ನಾಯಕ ನಟನಾಗಿ ಅಭಿನಯಿಸಲಿದ್ದು ಮೊದಲ ಬಾರಿಗೆ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ಈ ಚಿತ್ರಕ್ಕೆ ಶ್ರೀರಾಜ್ ಎಂಬುವವರು ಆಕ್ಷನ್ ಕಟ್ ಹೇಳಲಿದ್ದಾರೆ. ಹಿರಿಯ ನಿರ್ದೇಶಕರಾದ ಕೆ.ವಿ ರಾಜು ಹಾಗೂ ರವಿ ಶ್ರೀವತ್ಸ ಗರಡಿಯಲ್ಲಿ ಪಳಗಿದ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಕನ್ನಡದ ಪ್ರತಿಭಾನ್ವಿತ ನಾಯಕ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದು, ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ,ಅವಿನಾಶ್, ಮಾನಸಿ ಸುಧೀರ್ ರಂತಹ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಇಲ್ಲಿಯವರೆಗೂ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಕೊತ್ತಲವಾಡಿಯಲ್ಲಿ ಕಂಪ್ಲೀಟ್ ಮಾಸ್ ಗೆಟಪ್ ತೊಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ನಲ್ಲಿಯೂ ಪೃಥ್ವಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

PA ಪ್ರೊಡಕ್ಷನ್ಸ್ ಪ್ರಮುಖ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಅದರಂತೆ ಕೊತ್ತಲವಾಡಿ ಚಿತ್ರದಲ್ಲಿಯೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ. ಯುವ ನಿರ್ದೇಶಕರ ಜೊತೆಗೆ ಹಿನ್ನೆಲೆ ಸಂಗೀತ ಕೊಟ್ಟಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಕೂಡ ಹೊಸಬರಾಗಿದ್ದಾರೆ.ಕಾರ್ತಿಕ್ ಎಸ್ ಕ್ಯಾಮೆರಾ ಕೈಚಳಕ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಕಿನ್ನಾಳ್ ರಾಜ್ ಹಾಗೂ ಗೌಸ್ ಪಿರ್ ಸಾಹಿತ್ಯ ಕೊತ್ತಲವಾಡಿ ಸಿನಿಮಾಗೆ ಇದೆ.
ಕೊತ್ತಲವಾಡಿ ಎಂಬ ಹೆಸರನ್ನು ಚಾಮರಾಜನಗರ ಮತ್ತು ಗುಂಡ್ಲುಪೇಟೆ ನಡುವೆ ಇರುವ ನಿಜವಾದ ಸ್ಥಳದಿಂದ ಪಡೆಯಲಾಗಿದೆ” ಎಂದು ಶ್ರೀರಾಜ್ ಹಂಚಿಕೊಳ್ಳುತ್ತಾರೆ. “ಈ ಚಿತ್ರವು ಆ ಪ್ರದೇಶದ ಕಥೆಯನ್ನು ಹೇಳುತ್ತದೆ, ನಮ್ಮ ಸಮುದಾಯಗಳಲ್ಲಿ ಮುಗ್ಧತೆಯನ್ನು ಹೇಗೆ ಹೆಚ್ಚಾಗಿ ಶೋಷಿಸಲಾಗುತ್ತದೆ ಎಂಬುದನ್ನು ಅನ್ವೇಷಿಸುತ್ತದೆ. ಇದು ಆಕ್ಷನ್, ನಾಟಕ ಮತ್ತು ರಾಜಕೀಯವನ್ನು ಬಲವಾದ ಸಾಮಾಜಿಕ ಸಂದೇಶದೊಂದಿಗೆ ಬೆರೆಸುತ್ತದೆ. ಪೃಥ್ವಿ ವಿಚಿತ್ರ ಪರಿಸ್ಥಿತಿಗಳ ವಿರುದ್ಧ ಎದ್ದು ನಿಲ್ಲುವ ಸಾಮಾನ್ಯ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುತ್ತಾರೆ.

