ಉ.ಪ್ರದೇಶ :ಮೀರತ್ನ ಉಜ್ವಲ್ ಗಾರ್ಡನ್ ಕಾಲೋನಿಯಲ್ಲಿ ವಾಸಿಸುವ ಮುಸ್ಲಿಂ ಧರ್ಮಗುರು ಮೌಲಾನಾ ಶಕೀರ್ ಎಂಬವರು ಏಳು ತಿಂಗಳ ಹಿಂದೆ ಇಂಚೋಲಿಯ 25 ವರ್ಷದ ಅರ್ಷಿ ಎಂಬವಳನ್ಙು ವಿವಾಹವಾದರು.12 ನೇ ತರಗತಿಯವರೆಗೆ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿರುವ ಅರ್ಷಿ ಪ್ರಸ್ತುತ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮೌಲಾನ ಶಕೀರ್ ಪ್ರಕಾರ ಅವರ ಪತ್ನಿ ತಮ್ಮ ಮದುವೆಯ ನಂತರ ಗಡ್ಡವನ್ನು ಬೋಳಿಸಲು ಒತ್ತಾಯಿಸುತ್ತಿದ್ದಳು ಅವಳಿಗೆ ಉದ್ದನೆಯ ಗಡ್ಡ ಕಂಡರೆ ಇಷ್ಟ ಆಗುತ್ತಿರಲ್ಲಿಲ್ಲ ಅಲ್ಲದೆ ಕ್ಲೀನ್ ಶೇವ್ ಮಾಡಿ ಹ್ಯಾಂಡ್ ಸಮ್ ತರ ಕಾಣಿಸಬೇಕೆಂದು ಹೇಳುತ್ತಿದ್ದಳು.ಆದರೆ ನನಗೆ ಧಾರ್ಮಿಕ ಕಟ್ಟುಪಾಡುಗಳ ಕಾರಣಗಳಿಂದಾಗಿ ಗಡ್ಡ ಬೋಳಿಸಲು ಸಾಧ್ಯ ಆಗುತ್ತಿರಲ್ಲಿಲ್ಲ ಇದರಿಂದಾಗಿ ನಾನು ನಿರಂತರ ಆಕೆಯ ಆಯ್ಕೆಯನ್ನು ನಿರಾಕರಿಸುತ್ತಿದ್ದೆ ಇದರಿಂದಾಗಿ ಕೋಪಗೊಂಡು ನನ್ನೊಡನೆ ನಿರಂತರ ಜಗಳವಾಡುತ್ತಿದ್ದಳು.

ಈ ವಿಷಯವು ಆಗಾಗ್ಗೆ ವಿವಾದಕ್ಕೆ ಕಾರಣವಾಗಿದ್ದು ಇದು ಎರಡೂ ಕುಟುಂಬಗಳಿಂದ ಪದೇ ಪದೇ ವಾದಗಳು ಮತ್ತು ಹಸ್ತಕ್ಷೇಪಗಳಿಗೆ ಕಾರಣವಾಯಿತು. ತನ್ನ ಪೂರ್ಣ ಒಪ್ಪಿಗೆಯಿಲ್ಲದೆ ತಮ್ಮ ಮದುವೆ ನಡೆದಿದೆ ಮತ್ತು ಅವನು ಕ್ಷೌರ ಮಾಡಿಸಿಕೊಳ್ಳದ ಹೊರತು ತಾನು ಅವನೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಅರ್ಷಿ ಶಕೀರ್ಗೆ ಹೇಳಿದ್ದೇನೆಂದು ತಿಳಿಸಿದ್ದಾಳೆ. ಘರ್ಷಣೆ ಉಲ್ಬಣಗೊಳ್ಳುತ್ತಿದ್ದಂತೆ ಅರ್ಷಿ ಶಕೀರ್ನ 24 ವರ್ಷದ ಕಿರಿಯ ಸಹೋದರ ಮೊಹಮ್ಮದ್ ಸಬೀರ್ ನೊಂದಿಗೆ ಸಂಬಂಧವನ್ನು ಪ್ರಾರಂಭಿಸಿದ್ದಳು ಅವನು ನೀಟಾಗಿ ಕ್ಲೀನ್ ಶೇವ್ ಮಾಡಿಸಿಕೊಂಡು ಸ್ಲೀಮ್ ಆಂಡ್ ಟ್ರಿಮ್ ಆಗಿದ್ದು ಅವಳ ಆಯ್ಕೆಗೆ ತಕ್ಕುದಾದ ವರ ಅಗಿದ್ದನು ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಅಂತಿಮವಾಗಿ ಫೆಬ್ರವರಿ 3 ರಂದು ಇಬ್ಬರು ಮನೆ ಬಿಟ್ಟು ಪರಾರಿಯಾಗಿದ್ದಾರೆ,

ಇದು ಶಕೀರ್ ಮತ್ತು ಅವನ ಕುಟುಂಬವನ್ನು ಆಘಾತಕ್ಕೆ ಒಳಪಡಿಸಿತು. ಸಂಬಂಧಿಕರ ಸಹಾಯದಿಂದ ಅವರನ್ನು ಪತ್ತೆಹಚ್ಚಲು ಶಕೀರ್ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಯಿತು.ನಂತರ ಅವನು ತನ್ನ ಹೆಂಡತಿ ಮತ್ತು ಸಹೋದರನ ಮೇಲೆ ಕಾಣೆಯಾಗಿದ್ದಾರೆಯೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅರ್ಷಿಯ ಕುಟುಂಬಕ್ಕೆ ಶಕೀರ್ ಮಾಹಿತಿ ನೀಡಿದ್ದಾನೆ. ಆದರೆ ಅವರು ಮಧ್ಯಪ್ರವೇಶಿಸಲು ನಿರಾಕರಿಸಿದರು, ಆಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದೇವೆ ಎಂದು ಹೇಳಿಕೊಂಡರು. ಇದರಿಂದ ನೊಂದ ಶಕೀರ್ ಇತ್ತ ಹೆಂಡತಿಯೂ ಇಲ್ಲದೆ ಅತ್ತ ಗಡ್ಡವನ್ನೂ ತೆಗೆಯಲು ಆಗದೆ ಕಂಗಾಳಾಗಿದ್ದಾನೆ.


