ಬಜಪೆ : ಮಂಗಳೂರಿನ ಬಜಪೆ ಹೊರವಲಯದ ಕಿನ್ನಿಪದಪು ಎಂಬಲ್ಲಿ ಇಂದು ರಾತ್ರಿ ಯುವಕನ ಮೇಲೆ ತಂಡವೊಂದು ತಲವಾರಿನಿಂದ ಹಲ್ಲೆ ನಡೆಸಿದ್ದು ಗಂಭೀರವಾಗಿ ಗಾಯಗೊಂಡ ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದೀಗ ಆತ ಮ್ರತಪಟ್ಟಿದ್ದಾನೆಂದು ತಿಳಿದು ಬಂದಿದೆ.

ಮ್ತತ ಯುವಕ ಕಾಟಿಪಳ್ಳ ನಿವಾಸಿಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಎಂದು ಗುರುತಿಸಲಾಗಿದೆ ಈತ 2022 ರಲ್ಲಿ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಕೊಲೆಗೆ ಪ್ರತಿಕಾರವಾಗಿ ಕಾಟಿಪಳ್ಳ ಮಂಗಳಪೇಟೆ ಅಮಾಯಕ ಯುವಕ ಮೊಹಮ್ಮದ್ ಫಾಜಿಲ್ ಅವರನ್ನು 6ಜನರ ತಂಡವೊಂದು ಸುರತ್ಕಲ್ ನ ಅಂಗಡಿ ಮುಂದೆ ಭೀಕರವಾಗಿ ಕಡಿದು ಕೊಲೆ ಮಾಡಲಾಗಿತ್ತು ಆ ತಂಡದ ನೇತೃತ್ವವನ್ನು ಸುಹಾಸ್ ಶೆಟ್ಟಿ ನಿರ್ವಹಿಸಿದ್ದ


ಇಂದು ರಾತ್ರಿ ಬಜಪೆ ಕಿನ್ನಿಪದಪು ಪೆಟ್ರೋಲ್ ಪಂಪ್ ಬಳಿ ಕಾರಿನಲ್ಲಿ ಸಾಗುತ್ತಿದ್ದ ಸುಹಾಸ್ ಶೆಟ್ಟಿ ಮತ್ತು ಸ್ನೇಹಿತ ಇದ್ದ ಕಾರನ್ನು ದುಷ್ಕರ್ಮಿಗಳು ಪಿಕಪ್ ವಾಹನದಿಂದ ಅಡ್ಡಗಟ್ಟಿ ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ನಗರದ ಎ.ಜೆ ಆಸ್ಪತ್ರೆಗೆ ಸಾಗಿಸಿದರೂ ಇದೀಗ ಸುಹಾಸ್ ಶೆಟ್ಟಿ ಮ್ರತ ಪಟ್ಟಿದ್ದಾರೆಂದು ತಿಳಿದು ಬಂದಿದೆ.ಹತ್ಯೆ ಹಿನ್ನೆಲೆಯಲ್ಲಿ ನಗರದ ಎ.ಜೆ. ಆಸ್ಪತ್ರೆ ಎದುರು ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ನೆರೆದಿದ್ದು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ಡಾ.ವೈ. ಭರತ್ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಎದುರು ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

