ಮಂಗಳೂರು : ಮಂಗಳೂರಿನ ಹೊರ ವಲಯದ ಬಜ್ವೆ ಸಮೀಪದ ಕಿನ್ನಿ ಪದವು ಎಂಬಲ್ಲಿ ನಿನ್ನೆ ನಡೆದ ಸುಹಾಸ್ ಶೆಟ್ಟಿ ಹತ್ಯಾ ಪ್ರಕರಣದ ನಂತರ ಇಡೀ ಮಂಗಳೂರು ಬೆಚ್ಚಿ ಬಿದ್ದಿದ್ದು ಇದೀಗ ಎರಡು ಸಮುದಾಯದ ಮಧ್ಯೆ ಪ್ರತೀಕಾರದ ದಾಳಿ ನಡೆಯುವ ಸಂಭವ ಗೋಚರಿಸುತ್ತಿದೆ.

ಇಂದು ಬೆಳಗ್ಗಿನ ಜಾವ ತೊಕ್ಕೋಟ್ಟು ಒಳಪೇಟೆಯ ನಿವಾಸಿಯಾದ ಫೈಝಲ್ ಎಂಬ ಯುವಕ ಕಲ್ಲಪ್ಪುವಿನಲ್ಲಿರುವ ಮಾರ್ಕೆಟ್ ಗೆ ರಾತ್ರಿ12:30 ಕ್ಕೆ ತೆರಳುತ್ತಿದ್ದ ವೇಳೆ ಒಳಪೇಟೆಯಲ್ಲಿ ಹೊಂಚು ಹಾಕಿ ಕುಳಿತ್ತಿದ್ದ ದುಷ್ಕರ್ಮಿಗಳು ಫೈಝಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಇದೇ ರೀತಿ ಅಡ್ಯಾರ್ ಕಣ್ಣೂರಿನ ನಿವಾಸಿ ನೌಶಾದ್ ಎಂಬವರು ಬೆಳ್ಳಗಿನ ಜಾವ 3 ಗಂಟೆಗೆ ಕಲ್ಲಾಪ್ಪುವಿನ ಮಾರ್ಕೆಟ್ ಗೆ ತೆರಳಲು ಅಡ್ಯಾರ್ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಸಂದರ್ಭದಲ್ಲಿ 2 ಬೈಕಿನಲ್ಲಿ ಬಂದ ನಾಲ್ಕು ಜನ ದುಷ್ಕರ್ಮಿಗಳು ನೌಶಾದ್ ಬೆನ್ನಿಗೆ ಚೂರಿಯಿಂದ ಇರಿದ್ದಿದ್ದು ಕೂಡಲೇ ನೌಶಾದ್ ಆ ಸಂದರ್ಭದಲ್ಲಿ ಓಡಿ ಪರಾರಿಯಾಗಿದ್ದು ಆತನನ್ನು ಸ್ಥಳೀಯರು ಸೇರಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಅಲ್ಲದೆ ಉಡುಪಿಯಲ್ಲಿಯೂ ಕೂಡಾ ಪ್ರತೀಕಾರದ ದಾಳಿ ನಡೆದಿದ್ದು ಉಡುಪಿಯ ಅತ್ರಾಡಿ ಬಳಿ ಆಟೋ ಡ್ರೈವರ್ ಅಬೂಬಕ್ಕರ್ ಮೇಲೆ ಇಬ್ಬರು ದುಷ್ಕರ್ಮಿಗಳಾದ ಸುಶಾಂತ್ ಹಾಗೂ ಸಂದೇಶ್ ಪೂಜಾರಿ ಹಲ್ಲೆ ನಡೆಸಿದ್ದು ಕೂಡಲೇ ಕಾರ್ಯ ಪ್ರವರ್ತರಾದ ಹಿರಿಯಡ್ಕ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

