ಮಂಗಳೂರಿನ ಹೊರ ವಲಯದ ಬಜಪೆಯ ಕಿನ್ನಿಪದವುವಿನಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ನಂತರ ಕರಾವಳಿ ಜಿಲ್ಲೆಯಾದ್ಯಂತ ಶಾಂತಿ ಕದಡಿದ್ದು ಕಣ್ಣೂರು, ತೊಕ್ಕೋಟ್ಟು,ಉಡುಪಿಯ ಅತ್ರಾಡಿಯಲ್ಲಿ ನಡೆದ ಅಹಿತಕರ ಘಟನೆಯ ಬಳಿಕ ಇದೀಗ ಇಂದು ಸಂಜೆ 4:30ರ ವೇಳೆಗೆ ಪಂಜಿಮೊಗರುವಿನಲ್ಲಿ ಯುವಕನ ಮೇಲೆ ತಲವಾರು ದಾಳಿ ನಡೆದಿದೆ.

ಸ್ಥಳೀಯ ಮಾಹಿತಿಯ ಪ್ರಕಾರ ಇಬ್ಬರು ದುಷ್ಕರ್ಮಿಗಳು ತಲ್ವಾರ್ ಹಿಡಿದುಕೊಂಡು ಬೈಕಿನಲ್ಲಿ ತೆರಳುತ್ತಿದ್ದ ಯುವಕನನ್ನು ಅಟ್ಟಾಡಿಸಿದ್ದಾರೆ. ಆದರೆ ತಲ್ವಾರ್ ಬೀಸಿದ ತಕ್ಷಣ ಯುವಕ ಬೈಕನ್ನು ವೇಗವಾಗಿ ಚಲಾಯಿಸಿ ಎಸ್ಕೇಪ್ ಆಗಿದ್ದು ಯುವಕನಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಾವೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

