ಮಂಗಳೂರು : ಬೆನಕ ಟಾಕೀಸ್ ಬ್ಯಾನರ್ನಲ್ಲಿ ಮುದೇಗೌಡ್ರು ನವೀನ್ ಕುಮಾರ್ ಹಾಗೂ ತೆಲಗಿ ಮಲ್ಲಿಕಾರ್ಜುನಪ್ಪ ನಿರ್ಮಾಣದ ನಾಗರಾಜ್ ಶಂಕರ್ ನಿರ್ದೇಶನದ “ಮರಳಿ ಮನಸಾಗಿದೆ ” ಕನ್ನಡ ಚಲನಚಿತ್ರ ಬರುವ ಜುಲೈ ತಿಂಗಳಿನಲ್ಲಿ ತೆರೆಗೆ ಬರಲಿದೆ ಎಂದು ನಟ ಭೋಜರಾಜ್ ವಾಮಂಜೂರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಚಿತ್ರವು ವಿಭಿನ್ನ ಕಥೆಯನ್ನು ಹೊಂದಿದೆ ನನಗೆ ನಿರ್ದೇಶಕರು ಒಂದು ಒಳ್ಳೆಯ ಪಾತ್ರವನ್ನು ನೀಡಿದ್ದಾರೆ ಅಲ್ಲದೆ ಚಿತ್ರದಲ್ಲಿ ನನ್ನ ಪಾತ್ರವು ಎರಡು ವಿಭಿನ್ನ ಶೇಡ್ ಗಳಲ್ಲಿ ಬರುತ್ತದೆ ಎಂದರು.ನಂತರ ಮಾತನಾಡಿದ ನಿರ್ದೇಶಕ ನಾಗರಾಜ್ ಶಂಕರ್ ಈ ಚಿತ್ರವು ನನ್ನ ಮೊದಲ ಚಿತ್ರವಾಗಿದ್ದು ವಿಭಿನ್ನ ರೀತಿಯ ಕಥೆಯನ್ನು ಮಾಡಿದ್ದೇನೆ.ಈ ಚಿತ್ರವು ಎರಡು ರೀತಿಯ ಕಥೆಗಳನ್ನು ಹೊಂದಿದ್ದು ಇಂಟರ್ವಲ್ ಗೆ ಮೊದಲು ಒಂದು ಸಿನೆಮಾ ಇಂಟರ್ವೆಲ್ ನಂತರ ಮತ್ತೊಂದು ಸಿನೆಮಾ ಇದರಲ್ಲಿದೆ ಎಂದರು.

ನಟ ಅರ್ಜುನ್ ವೇದಾಂತ್ ಮಾತನಾಡಿ ನನ್ನ ಸಿನಿ ಜರ್ನಿಯು ಶುರುವಾದದ್ದೇ ತುಳು ಚಿತ್ರದ ಮೂಲಕ ನಂತರ ನಾಲ್ಕು ಕನ್ನಡ ಚಿತ್ರದಲ್ಲಿ ಅಭಿನಯ ಅಲ್ಲದೆ ತಮಿಳು, ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾನೆ.ಈ ಚಿತ್ರದಲ್ಲಿ ನನ್ನ ಪಾತ್ರವು ವಿಭಿನ್ನವಾಗಿದ್ದು 4 ಶೇಡ್ ಗಳಲ್ಲಿ ಅಭಿನಯಿಸಿದ್ದೇನೆ.ಚಿತ್ರದ ಕಥೆಯು ಶೇಕಡಾ 60 ರಷ್ಟು ಕರಾವಳಿಯ ಪ್ರದೇಶದಲ್ಲಿ ನಡೆಯುತ್ತದೆ ನಂತರ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆಯಲ್ಲಿ ಮುಂದುವರಿಯುತ್ತದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿದ್ದು ಮೂರನೇ ಹಾಡು ಇಂದು ಉಡುಪಿಯಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದರು.

ಚಿತ್ರದಲ್ಲಿ ನಾಯಕನಾಗಿ ಅರ್ಜುನ್ ವೇದಾಂತ್,ನಾಯಕಿಯಾಗಿ ನಿರೀಕ್ಷಾ ಶೆಟ್ಟಿ, ಸ್ಮ್ರತಿ ವೆಂಕಟೇಶ್, ಟಿ.ಎಸ್ ನಾಗಭರಣ,ಮಾನಸಿ ಸುಧೀರ್,ಸ್ವಾತಿ, ಸೀರುಂಡೆ ರಘು,ಭೋಜರಾಜ್ ವಾಮಂಜೂರು,ರೋಹನ್ ಅಲ್ಲದೆ ಕರಾವಳಿಯ ಹಲವು ಕಲಾವಿದರು ಅಭಿನಯಿಸಿದ್ದಾರೆ
ಚಿತ್ರಕ್ಕೆ ವಿನು ಮನಸು ಸಂಗೀತ ನೀಡಿದ್ದಾರೆ, ಸಾಹಿತ್ಯ ಕೆ ಕಲ್ಯಾಣ್,ಆಶೀತ್ ಸುಬ್ರಹ್ಮಣ್ಯ, ನಾಗರಾಜ್ ಶಂಕರ್, ಹರೀಶ್ ಎಸ್,ಛಾಯಾಗ್ರಹಣ ಹಾಲೇಶ್.ಎಸ್, ಸಂಕಲನ ಹರೀಶ್ ಕೊಮ್ಮೆ,ಸಾಹಸ ಅಲ್ಟಿಮೇಟ್ ಶಿವು,ನಿರ್ಮಾಣ ಮೇಲ್ವಿಚಾರಣೆ ವಿಜಯಕುಮಾರ್ ಎಸ್, ಸಹ ನಿರ್ದೇಶನ ಅಶೀತ್ ಸುಬ್ರಹ್ಮಣ್ಯ, ಸಹ ನಿರ್ಮಾಪಕ ನಾಗರಾಜ್ ಶಂಕರ್, ಅಶೀತ್ ಶಂಕರ್, ವಿಜಯಕುಮಾರ್ ಎಸ್,

ಪತ್ರಿಕಾಗೋಷ್ಠಿಯಲ್ಲಿ ಮುರಳಿ, ಸ್ಮೃತಿ ವೆಂಕಟೇಶ್, ಆಶಿತ್ ಸುಬ್ರಹ್ಮಣ್ಯ, ನವೀನ್ ಕುಮಾರ್, ರೋಹನ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

