ಮಂಗಳೂರು : ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಬರ್ಬರ ಹತ್ಯೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ ಆಗರವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳಾದ ಡ್ರೈವರ್ ಅಬ್ದುಲ್ ಸಫ್ವಾನ್,ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಶಾಂತಿಗುಡ್ಡೆ ನಿವಾಸಿ ನಿಯಾಜ್, ಶಾಂತಿಗುಡ್ಡೆ ನಿವಾಸಿ ಮೊಹಮ್ಮದ್ ಮುಜಾಮಿಲ್, ಕಳವಾರು ಕುರ್ಸಗುಡ್ಡೆ ನಿವಾಸಿ ಕಲಂದರ್ ಶಾಫಿ,ಕಾಟಿಪಳ್ಳ ಮಂಗಳಪೇಟೆ ನಿವಾಸಿ ಆದಿಲ್ ಮೆಹರೂಫ್, ಕಳಸ ನಿವಾಸಿ ನಾಗರಾಜ್, ಜೋಕಟ್ಟೆ ನಿವಾಸಿ ಮೊಹಮ್ಮದ್ ರಿಜ್ವಾನ್ ಮತ್ತು ಕಳಸ ನಿವಾಸಿ ರಂಜಿತ್ ಎಂದು ಗುರುತಿಸಲಾಗಿದೆ.
ಸುಹಾಸ್ ಶೆಟ್ಟಿ ಹಾಗೂ ಸ್ನೇಹಿತರಾದ ಪ್ರಶಾಂತ್ ಮತ್ತು ಧನರಾಜ್ ಸೇರಿ ಸಫ್ವಾನ್ ಮೇಲೆ 2023ರಲ್ಲಿ ಹಲ್ಲೆ ನಡೆಸಿದ್ದರು ಮುಂದೆ ಇವರಿಂದ ತನಗೆ ಅಪಾಯ ತಪ್ಪಿದ್ದಲ್ಲ ಎಂದು ತಿಳಿದ ಸಫ್ವಾನ್ ಸುಹಾಸ್ ನನ್ನು ಹೇಗಾದರೂ ಮಾಡಿ ಕೊಲೆ ಮಾಡಲು ತೀರ್ಮಾನಿಸಿದ್ದ ಈ ಬಗ್ಗೆ ಸುಹಾಸ್ ನಿಂದ ಹತ್ಯೆಯಾಗಿದ್ದ ಫಾಜಿಲ್ ನ ಸಹೋದರ ಆದಿಲ್ ಮೆಹರೂಫನ್ನು ಸಂಪರ್ಕಿಸಿ ಸುಹಾಸ್ ನನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದ

ಸುಹಾಸ್ ನ ಕೊಲೆ ಮಾಡಲು ಹಣಕಾಸಿನ ವ್ಯವಸ್ಥೆಯನ್ನು ಆದಿಲ್ ವಹಿಸಿಕೊಂಡಿದ್ದ ಅದಕ್ಕಾಗಿ 5 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದ 3 ಲಕ್ಷ ರೂಪಾಯಿ ಮುಂಗಡ ನೀಡಿ ಬಾಕಿ ಉಳಿದ 2 ಲಕ್ಷ ರೂ ಕೊಲೆ ಕ್ರತ್ಯದ ನಂತರ ನೀಡುವುದಾಗಿ ಭರವಸೆ ನೀಡಿದ್ದ ಕೊಲೆಗೆ ಸುಪಾರಿ ಪಡೆದುಕೊಂಡ ಬಳಿಕ ಸಫ್ವಾನ್ ತನ್ನ ಮಿತ್ರರಾದ ಚಿಕ್ಕಮಗಳೂರು ಜಿಲ್ಲೆಯ ಕಳಸದ ಸುಪಾರಿ ಕಿಲ್ಲರ್ ನಾಗರಾಜ್ ಮತ್ತು ರಂಜಿತ್ ಎಂಬವರನ್ನು 10 ದಿನಗಳ ಮೊದಲೇ ಕರೆಸಿಕೊಂಡು ಬಂದು ಒಂದು ತಂಡ ರಚಿಸಿ ಇವರಿಬ್ಬರನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ಈ ತಂಡ ಸುಹಾಸ್ ಮೇಲೆ ಎರಡು ಮೂರು ಬಾರಿ ಕೊಲೆ ಯತ್ನ ನಡೆಸಿದರು ಆದರೆ ಸಫಲರಾಗಲಿಲ್ಲ ಆದರೆ ಮೇ 1ರಂದು ರಾತ್ರಿ ಬಜ್ವೆ ಸಮೀಪದ ಕಿನ್ನಿಪದವು ಎಂಬಲ್ಲಿ ಸುಹಾಸ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬರುತ್ತಿರುವಾಗ ಕಾರಿಗೆ ಮೀನಿನ ಪಿಕಪ್ ವಾಹನ ಮೂಲಕ ಡಿಕ್ಕಿ ಹೊಡೆದು ಅಡ್ಡಗಟ್ಟಿ ತಲವಾರಿನಿಂದ ಬರ್ಬರವಾಗಿ ಕಡಿದು ಕೊಲೆ ಮಾಡಲಾಯಿತು.ಇದು ಪೂರ್ವ ದ್ವೇಷದಿಂದ ಯೋಜಿತ ರೀತಿಯ ಕೊಲೆ ಎಂದು ಕಮೀಷನರ್ ಹೇಳಿದರು.

ಆರೋಪಿಗಳ ವಿರುದ್ಧ ಈಗಾಗಲೇ ಹಲವು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ .ಕೊಲೆ ನಡೆದ ತಕ್ಷಣ ಸ್ಥಳದಿಂದ ಆರೋಪಿಗಳು ಪರಾರಿಯಾಗುವ ದ್ರಶ್ಯದ ವಿಡಿಯೋ ವೈರಲ್ ಆಗಿದ್ದು ವೈರಲ್ ಆದ ವಿಡಿಯೋದಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರಿದ್ದರು.ಅವರಿಬ್ಬರೂ ಆರೋಪಿ ನಿಯಾಜ್ ನ ಸಂಬಂಧಿಕರಾಗಿದ್ದು ಅವರ ಗುರುತು ಪತ್ತೆ ಹಚ್ಚಲಾಗಿದ್ದು ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಕಮೀಷನರ್ ತಿಳಿಸಿದರು.

