ಬಜಪೆ: ಪೊಪ್ಯುಲರ್ ಜಗದೀಶ ಸಿ. ಶೆಟ್ಟಿ ಚಾರಿಟೇಬಲ್ ಫೌಂಡೇಶನ್, ಪೊಪ್ಯುಲರ್ ಬಂಟ್ಸ್ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆ, ಮಳವೂರು ಆಶ್ರಯದಲ್ಲಿ ಸಂಸ್ಥೆಯ ಸ್ಥಾಪಕ ಕಾರ್ಯಾಧ್ಯಕ್ಷ ಹಾಗೂ ಸಂಚಾಲಕರಾಗಿದ್ದ ದಿ. ಪೊಪ್ಯುಲರ್ ಜಗದೀಶ ಸಿ. ಶೆಟ್ಟಿ ಅವರ 8ನೇ ಪುಣ್ಯಸಂಸ್ಕರಣಾ ಕಾರ್ಯಕ್ರಮವು ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.
ಫೌಂಡೇಷನ್ ಹಾಗೂ ಪ್ರೌಢಶಾಲೆಯ ಸಂಚಾಲಕರಾದ ಕೆ.ಕರುಣಾಕರ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಪೊಪ್ಯುಲರ್ ಜಗದೀಶ ಸಿ.ಶೆಟ್ಟಿ ಯವರ ಪ್ರತಿಮೆಗೆ ಹೂಹಾರ ಹಾಗೂ ಪುಷ್ಪ ನಮನ ಸಲ್ಲಿಸಿದರು. ಬಳಿಕ 40 ಮಂದಿ ಆಶಕ್ತರಿಗೆ ಹಾಗೂ 31 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒಟ್ಟು 10 ಲಕ್ಷರೂ. ಸಹಾಯ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಂಟ್ಸ್ ವೇಲ್ವೇರ್ ಟ್ರಸ್ಟಿನ ಹಾಗೂ ಪೊಪ್ಯುಲರ್ ಬಂಟ್ಸ್ ಇಂಗ್ಲೀಷ್ ಮೀಡಿಯಂ ಪ್ರೌಢಶಾಲಾ ಕಾರ್ಯ ದರ್ಶಿ ಗೋಪಿನಾಥ ಹೆಗ್ಡೆ ಪೊಪ್ಯುಲರ್ ಜಗದೀಶ ಸಿ.ಶೆಟ್ಟಿ ಯವರ ಆದರ್ಶ, ಮಾರ್ಗ
ದರ್ಶನ ನಮಗೆ ದಾರಿದೀಪ. ಉತ್ತಮ ಶಿಕ್ಷಣ ಸಂಸ್ಥೆಯಾಗ ಬೇಕು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಆಶಕ್ತರಿಗೆ ಧನ ಸಹಾಯ ಅವರ ಕನಸು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ದೊಂದಿಗೆ ಅವರಿಗೆ ಅರ್ಥಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಗುತ್ತಿದೆ ಎಂದರು.
ಟ್ರಸ್ಟಿನ ಕೋಶಾಧಿಕಾರಿ ರತ್ನಾಕರ ಶೆಟ್ಟಿ ಮಾತನಾಡಿ, ಪೊಪ್ಯುಲರ್ ಜಗದೀಶ್ ಸಿ.ಶೆಟ್ಟಿಯವರನೆನಪು ಸದಾ ಉಳಿಯುವಂತೆ ಮಾಡಿದೆ. ಸಂಸ್ಥೆಯಲ್ಲಿ 1,200 ವಿದ್ಯಾರ್ಥಿಗಳಿಗೆ ಶಿಕ್ಷಣ, ಸಹಾಯದ ನಿರೀಕ್ಷೆಯಲ್ಲಿ ಬಂದ ಅಶಕ್ತರಿಗೆ ಸಹಾಯ ಧನ ನೀಡುವ ಮೂಲಕ ಅವರ ಕನಸು ಸಾಕಾರಗೊಳಿಸಿದೆ ಎಂದರು. ಫೌಂಡೇಶನ್ ಕಾರ್ಯದರ್ಶಿ ಮತ್ತು ಟ್ರಸ್ಟಿ ಶಶಿರೇಖಾ ಜೆ.ಶೆಟ್ಟಿ, ಟ್ರಸ್ಟಿ ಸಂದೀಪ್ ರೈ, ಶಶಿಕಲಾ ಶೆಟ್ಟಿ ಅರ್ಚನಾ ಶೆಟ್ಟಿ ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯಿನಿ ಶಹನ ಎಂ.ಫೆಹಲವಿ ಸ್ವಾಗತಿಸಿದರು. ಶಿಕ್ಷಕಿ ಸಾಧನ ಶೆಟ್ಟಿ ಫಲಾನುಭವಿಗಳ ಹೆಸರನ್ನು ವಾಚಿಸಿದರು. ಸದಾಶಿವ ಎಂ. ನಿರೂಪಿಸಿದರು. ಸಹ ಮುಖ್ಯಶಿಕ್ಷಕಿ ಸೆಲ್ವಿನ್ ಸಲ್ವಾನ ವಂದಿಸಿದರು.

