ಮಂಗಳೂರು: ಗುರುಪುರ ಫಲ್ಗುಣಿ ನದಿತಟಾಕದ ಗೋಳಿದಡಿಗುತ್ತುವಿನ ಸುಕ್ಷೇತ್ರ ಗುರುಪುರ ಶ್ರೀ ಗುರುಮಹಾಕಾಲೇಶ್ವರ ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ ವೇದಕೃಷಿಕ ಬ್ರಹ್ಮ ಋಷಿ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಮೇ 15ರಿಂದ 17ರವರೆಗೆ ನಡೆಯಲಿದೆ ಅಲ್ಲದೆ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾದ ಶ್ರೀಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಏಕೈಕ ಮೂರ್ತಿಯು ಇದಾಗಿದ್ದು, ವೇದೋಕ್ತ ವಿಧಿವಿಧಾನಗಳಿಂದ ಪ್ರತಿಷ್ಠಾ ಪಂಚಕಲ್ಯಾಣಯುಕ್ತ ಬ್ರಹ್ಮಕಲಶಾಭಿಷೇಕ
ನಡೆಯಲಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೇ 16ರಂದು ಮಧ್ಯಾಹ್ನ 2:00 ರಿಂದ ಶ್ರೀ ಗುರು ಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ವಿಗ್ರಹಕ್ಕೆ ಬ್ರಹ್ಮಕಲಶಾಭಿಷೇಕವು ನಡೆಯಲಿದೆ ಅಂದು ಶ್ರೀ ದೇವಸ್ಥಾನದ ಕಾರ್ಯಾಲಯ ಶ್ರೀನಿತ್ಯಾನಂದ ಕಟ್ಟಡ, ದೇವಸ್ಥಾನ ಸಭಾಂಗಣ ಶ್ರೀ ಉಮಾ ಪದ್ಮನಾಭ ಸಭಾಂಗಣ, ದೇವಸ್ಥಾನದ ಅತಿಥಿಗೃಹ ಶ್ರೀ ಶಿವಪ್ರಕಾಶವನ್ನು ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮ ಋಷಿ ಶ್ರೀ ಕೆ.ಎಸ್. ನಿತ್ಯಾನಂದ ಗುರುಗಳು ಉದ್ಘಾಟಿಸಲಿದ್ದಾರೆ. ಗುರುಮಹಾಕಾಲೇಶ್ವರ ದೇವರ ಬ್ರಹ್ಮಕಲಶ ಸಂಭ್ರಮಕ್ಕೆ ಮೇ 14ರ ಮಧ್ಯಾಹ್ನ 3ರಿಂದ ಮೇ 15ರ ಸಂಜೆ 6 ರವರೆಗೆ ಹೊರೆಕಾಣಿಕೆ ಸಾರ್ವಜನಿಕರು ಸಮರ್ಪಿಸಬಹುದಾಗಿದೆ ಎಂದು ದುರ್ಗಾ ಪ್ರಸಾದ್ ಶೆಟ್ಟಿ ತಿಳಿಸಿದರು



ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕ ವಿಶೇಷ
ಶ್ರೀಗುರುಮಹಾಕಾಲೇಶ್ವರನಿಗೆ ಸಮಗ್ರ ಆಸ್ತಿಕ ಬಂಧುಗಳಿಗೆ ಜಾತಿ, ಪಂಗಡ, ಲಿಂಗ, ಭೇದವಿಲ್ಲದೆ ಕಲಾಭಿಷೇಕ ಮಾಡಲು ಮುಕ್ತ ಅವಕಾಶವಿದ್ದು ಭಕ್ತಾದಿಗಳು ಮುಂಗಡವಾಗಿ ತಮ್ಮ ಹೆಸರನ್ನು ಕಲಶ ಒಂದರ ನಿಗದಿಪಡಿಸಿದ ಕಾಣಿಕೆ ನೀಡಿ ನೋಂದಾಯಿಸಬಹುದಾಗಿದೆ.ಅಲ್ಲದೆ



ಬ್ರಹ್ಮಕಲಶ ಸಂಭ್ರಮದ ಮೂರು ದಿನಗಳಲ್ಲಿ ಅನ್ನಸಂತರ್ಪಣೆ, ಉಪಾಹಾರ, ಅತಿಥಿ ಸತ್ಕಾರ, ಭಜನಾ ಸಂಕೀರ್ತನೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರವಚನ ಪ್ರತಿನಿತ್ಯವೂ ಭಕ್ತರಿಗೆ ಮನೋಸಂಕಲ್ಪ ಈಡೇರಿಕೆಗೆ ಗುರುಮಹಾಕಾಲೇಶ್ವರನಿಗೆ ಪೂಜೆ ಮಾಡಲು ಅವಕಾಶವಿದೆ ಎಂದು ಸುಕ್ಷೇತ್ರಾಧ್ಯಕ್ಷರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ತಿಳಿಸಿದ್ದಾರೆ.



ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರು ಮಹಾಕಾಲೇಶ್ವರ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಮತಿ ಉಷಾ ಪ್ರಸಾದ್ ಶೆಟ್ಟಿ, ಬ್ರಹ್ಮಕಳಸ ಸಮಿತಿಯ ಪ್ರ.ಕಾರ್ಯದರ್ಶಿ ದಿವಾಕರ ಸಾಮಾನಿ,ಸ್ವಾಗತ ಸಮಿತಿಯ ಅಧ್ಯಕ್ಷ ರೋಹಿತ್ ಕಟೀಲ್,ಸತೀಶ್ ಕಾವ,ಸುನೀಲ್ ಕುಮಾರ್ ಸುವರ್ಣ,ದಿವ್ಯ ರತನ್ ಶೆಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರ : ಸತೀಶ್ ಕಾಪಿಕಾಡ್

