ಮಂಗಳೂರು : ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿಯ ಮೇಲೆ ಮಂಗಳೂರು ಜೈಲಿನಲ್ಲಿ ಸಹ ಕೈದಿಗಳಿಂದ ದಾಳಿ ನಡೆದಿದೆ

ಪ್ರಕರಣದ ಪ್ರಮುಖ ಆರೋಪಿಯಾದ ನೌಶಾದ್ ಆಲಿಯಾಸ್ ವಾಮಂಜೂರು ನೌಶಾದ್ ಅಲಿಯಾಸ್ ಚೊಟ್ಟೆ ನೌಶಾದ್ ಮೇಲೆ ಸಹ ಕೈದಿಗಳು ಕಲ್ಲು ತೂರಾಟ ನಡೆಸಿದ್ದು ಅದ್ರಷ್ಟವಾಶತ್ ಅಪಾಯದಿಂದ ಪಾರಾಗಿದ್ದಾನೆ.
ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ನೌಶಾದ್ ನನ್ನು ಮಂಗಳೂರು ಜೈಲಿಗೆ ಕರೆತರಲಾಗಿತ್ತು.ದಾಳಿಯ ಮುನ್ಸೂಚನೆ ಮೊದಲೇ ತಿಳಿದಿದ್ದ ಪೋಲಿಸರು ಆತನನ್ನು ಮೈಸೂರು ಜೈಲಿಗೆ ಕಳುಹಿಸಲು ಮೊದಲೇ ನಿರ್ಧರಿಸಿದ್ದರು ಅದಕ್ಕೂ ಮುನ್ನ ಮಂಗಳೂರು ಜೈಲಿಗೆ ಕರೆತರಲಾಗಿತ್ತು.ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿಯನ್ನು ತಪ್ಪಿಸಿದ್ದಾರೆ

ಈಗಾಗಲೇ ಈತನ ವಿರುದ್ಧ ಬಜ್ವೆ, ಸುರತ್ಕಲ್, ಮಂಗಳೂರು, ಮೂಡಬಿದಿರೆ, ಬಂಟ್ವಾಳ, ಪೋಲಿಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ,ದರೋಡೆ ಮುಂತಾದ 6 ಪ್ರಕರಣಗಳಿವೆ

