ಮಂಗಳೂರು : ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಇದರ ನೇತ್ರತ್ವದಲ್ಲಿ ಮಂಗಳೂರು ಕೊಡಿಯಾಲ್ ಬೈಲ್ ನ ರಾಷ್ಟ್ರೀಯ ಮಹಿಳಾ ಶೈಕ್ಷಣಿಕ ಸಂಸ್ಥೆಯ ಬೆಸೆಂಟ್ ಸಮೂಹ ಸಂಸ್ಥೆ ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಭಾಗಿತ್ವದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮ ಮೇ 25 ರಂದು ಬೆಳ್ಳಗೆ 9 ರಿಂದ ಸಂಜೆ 5 ರವರೆಗೆ ಮಂಗಳೂರಿನ ಬೆಸೆಂಟ್ ಮಹಿಳಾ ಪಿ.ಯು ಕಾಲೇಜಿನಲ್ಲಿ ಜರಗಲಿದೆ ಎಂದು ರೋಟರಿ ಅಧ್ಯಕ್ಷರಾದ ಬ್ರಾಯನ್ ಪಿಂಟೋ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಂತರ ಮಾತನಾಡಿದ ಭಾಸ್ಕರ್ ಕಟ್ಟ ಅವರು ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಉಚಿತ ಶಿಬಿರವನ್ನು ಮಾಡುತ್ತಿದ್ದು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಟೀಮ್ ಈಶ್ವರ್ ಮಲ್ಪೆ ಅವರು ಶ್ರವಣದ ಯಂತ್ರಕ್ಕೆ ಆಗುವ ವೆಚ್ಚದ ಶೇಖಡಾ 40% ಮೊತ್ತವನ್ನು ಭರಿಸುತ್ತಿದ್ದಾರೆ. ಈ ಶಿಬಿರದಲ್ಲಿ ನಾವು ಆಧುನಿಕ ತಂತ್ರಜ್ಞಾನದಿಂದ ಲಭ್ಯವಿರುವ ಪರೀಕ್ಷಾ ಉಪಕರಣಗಳು ಬಳಸುತ್ತೇವೆ ಮತ್ತು ಜರ್ಮನ್ ತಯಾರಿಕೆಯ GN Resound ಕಂಪನಿಯ ಕಿವಿ ಯಂತ್ರಗಳನ್ನು ಸಾರ್ವಜನಿಕರಿಗೆ ಒದಗಿಸುತ್ತೇವೆ. ಈ ಕಿವಿ ಯಂತ್ರಗಳಿಗೆ 2 ವರ್ಷಗಳ ಅಂತರರಾಷ್ಟ್ರೀಯ ವಾರಂಟಿ ಸಹ ಇರುತ್ತದೆ ಎಂದರು.


ಸೂಚನೆಗಳು
ನೋಂದಣಿ ಕಡ್ಡಾಯವಾಗಿ ಕರೆ ಮಾಡಿ ನೊಂದಾಯಿಸಿಕೊಳ್ಳಿ.
ಹಿರಿಯರಿಗೆ ಮೊದಲ ಆದ್ಯತೆ.
ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿ ಇದ್ದರೆ ಜೊತೆಯಲ್ಲಿ ತನ್ನಿ.
ಮೊದಲು ನೊಂದಾಯಿಸುವ 40 ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಲ್ಲಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9902344399/9741158710

