ದುಬೈ: ಕರ್ನಾಟಕ ಸಂಘ ದುಬೈ ವತಿಯಿಂದ “ಮೇಘ ಡ್ಯಾನ್ಸ್ ಕಪ್ -2025” ನೃತ್ಯ ಸ್ಪರ್ಧೆ ಕಾರ್ಯಕ್ರಮ ಮೇ.25 ರಂದು ನಡೆಯಲಿದೆ.
ದುಬೈನ ಊದ್ ಮೆತದ ಅಲ್ ನಾಸರ್ ಲೆಸಾರ್ ಲ್ಯಾಂಡ್ ಐಸ್ ರಿಂಕ್ ಸಭಾಂಗಣದಲ್ಲಿ ಮೇ 25ರಂದು ಬೆಳಿಗ್ಗೆ 10.30 ರಿಂದ ಸಂಜೆ 7ರ ವರೆಗೆ ಕಾರ್ಯಕ್ರಮ ನಡೆಯಲಿದ್ದು ಯುಎಇಯ ವಿವಿಧ ನೃತ್ಯ ತಂಡಗಳು ಈ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಈ ನೃತ್ಯ ಸ್ಪರ್ಧೆಗಳು ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ನಡೆಯಲಿದ್ದು. ನೃತ್ಯ ಸ್ಪರ್ಧೆಯೊಂದಿಗೆ ರಂಗೋಲಿ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಗಳು ಜರಗಲಿದೆ. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ತುಳು ಹಾಗೂ ಕನ್ನಡ ಚಿತ್ರರಂಗದ ನಾಯಕ ನಟ ಪೃಥ್ವಿ ಅಂಬರ್ ಭಾಗವಹಿಸಲಿದ್ದಾರೆ ಅಲ್ಲದೆ ಕರ್ನಾಟಕದ ಪ್ರಖ್ಯಾತ ತೀರ್ಪುಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಯುಎಇಯಲ್ಲಿರುವ ತುಳು ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಸಂಘ ದುಬೈಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


