ಬೆಂಗಳೂರು : ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಮಡೆನೂರು ಮನು ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು.ಇದೀಗ ಪೊಲೀಸರು ಮಡೆನೂರು ಮನುವನ್ನು ಬಂಧಿಸಿದ್ದಾರೆ. ಮಡೆನೂರು ಮನು ನಟನೆಯ ಕುಲದಲ್ಲಿ ಕೀಳ್ಯಾವುದೋ ಕನ್ನಡ ಸಿನಿಮಾ ನಾಳೆ ಬಿಡುಗಡೆಯಾಗಬೇಕಿತ್ತು. ಅದಕ್ಕೆ ಮೊದಲೇ ನಟನ ಬಂಧನವಾಗಿದೆ.

ಮಡೆನೂರು ಮನು ಮತ್ತು ಕಿರುತೆರೆ ನಟಿಯ ಮಧ್ಯೆ 2018ರಲ್ಲಿ ಪರಿಚಯ ಬೆಳೆದಿತ್ತು. ಮನು ಅವರೇ ಯುವತಿಗೆ ಬಾಡಿಗೆ ಮನೆ ಹುಡುಕಿಕೊಟ್ಟಿದ್ದ. ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದರು.ಯುವತಿ ಜೊತೆಗೆ ಆಪ್ತತೆ ಬೆಳೆಸಿಕೊಂಡಿದ್ದ.

ಮಡೆನೂರು ಮನುಗೆ ಈಗಾಗಲೇ ದಿವ್ಯ ಎಂಬವಳ ಜೊತೆ ಮದುವೆಯಾಗಿದ್ದು ಹೆಣ್ಣು ಮಗು ಇದೆ. 2022ರಂದು ಶಿವಮೊಗ್ಗದ ಶಿಕಾರಿಪುರದಲ್ಲಿ ಕಾರ್ಯಕ್ರಮ ಇತ್ತು.ಆ ಕಾರ್ಯಕ್ರಮಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ ಮಾಡಿದ್ದ.ಕಾರ್ಯಕ್ರಮ ಮುಗಿದ ಮೇಲೆ ಶಿಕಾರಿಪುರದ ಹೋಟೆಲ್ ರೂಮಿನಲ್ಲಿದ್ದಾಗ ನನಗೆ ಸಂಭಾವನೆ ನೀಡುವ ನೆಪದಲ್ಲಿ ರೂಮಿಗೆ ಬಂದು ನನ್ನ ಮೇಲೆ ಆತ್ಯಾಚಾರ ಮಾಡಿದ್ದ. ಇದಾದ ಮೇಲೆ 2022ರ ಡಿಸೆಂಬರ್ನಲ್ಲಿ ನನ್ನ ಮನೆಗೆ ಬಂದು ನನ್ನ ವಿರೋಧದ ನಡುವೆ ನನಗೆ ತಾಳಿ ಕಟ್ಟಿದ್ದ. ನಂತರ ಅದೇ ಮನೆಯಲ್ಲಿ ನನ್ನ ಮೇಲೆ ಹಲವಾರು ಬಾರಿ ಆತ್ಯಾಚಾರ ಎಸಗಿದ್ದ.ನಾನು ಪ್ರೆಗ್ನೆಂಟ್ ಆದ ವಿಚಾರ ತಿಳಿದ ಮನು ಮನೆಗೆ ಬಂದು ಗರ್ಭಪಾತ ಆಗುವ ಮಾತ್ರೆ ನೀಡಿದ್ದ. ನಂತರ ನಾನು ಮತ್ತೆ ಪ್ರಗ್ನೆಂಟ್ ಆಗಿದ್ದು ಮತ್ತೆ ಅದೇ ರೀತಿ ನನಗೆ ಗರ್ಭಪಾತ ಮಾಡಿಸಿದ್ದ.ಅಲ್ಲದೆ ನನ್ನ ಮೇಲೆ ಅತ್ಯಾಚಾರ ಮಾಡಿ ನನ್ನ ಖಾಸಗಿ ವಿಡಿಯೋವನ್ನು ಫೋನಿನಲ್ಲಿ ರೆಕಾರ್ಡ್ ಮಾಡಿದ್ದ ಅಷ್ಟೇ ಅಲ್ಲದೇ ಹೊಡೆದು ಹಲ್ಲೆ ಮಾಡಿ ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಪೋಲಿಸರಿಗೆ ದೂರಿನಲ್ಲಿ ತಿಳಿಸಿದ್ದಾಳೆ.

