ಮಂಗಳೂರು ಹೊರವಲಯದ ವಳಚ್ಚಿಲ್ನಲ್ಲಿ ತಡರಾತ್ರಿ ಚೂರಿ ಇರಿದು ವ್ಯಕ್ತಿಯನ್ನು ಕೊಲೆ ಮಾಡಿರುವ ಈ ಘಟನೆ ನಡೆದಿದೆ.
ಕೌಟುಂಬಿಕ ಕಲಹದ ನಂತರ ಸಂಬಂಧಿಕರೊಬ್ಬರು ನಡೆಸಿದ ದಾಳಿಯಲ್ಲಿ ವಾಮಂಜೂರು ನಿವಾಸಿ ಸುಲೇಮನ್( 50) ಎಂಬವರು ಮ್ರತ ಪಟ್ಟಿದ್ದು ಅವರ ಪುತ್ರರಾದ ರಿಯಾಬ್ ಮತ್ತು ಸಿಯಾಬ್ ದಾಳಿಯಲ್ಲಿ ಗಾಯಗೊಂಡಿದ್ದಾರೆ.

ಸುಲೇಮಾನ್ ಎಂಬವರು ಮದುವೆ ದಲ್ಲಾಲಿ ಕೆಲಸ ಮಾಡುತ್ತಿದ್ದು ಸುಮಾರು ಎಂಟು ತಿಂಗಳ ಹಿಂದೆ ಸಂಬಂಧಿ ಮುಸ್ತಫಾ (30)ಎಂಬವರಿಗೆ ಅಡ್ಡೂರು ಮೂಲದ ಶಹೀನಾಝ್ ಎನ್ನುವ ಹುಡುಗಿಯನ್ನು ಹುಡುಕಿ ಮದುವೆಗೆ ಸಹಾಯ ಮಾಡಿದ್ದ. ಮದುವೆಯ ನಂತರ ಮುಸ್ತಫಾ ಮತ್ತು ಆತನ ಪತ್ನಿ ಶಹಿನಾಜ್ ನಡುವೆ ಮನಸ್ತಾಪದ ಉಂಟಾಗಿದ್ದು.ಪದೇ ಪದೇ ಪತ್ನಿ ಮುಸ್ತಫಾನನ್ನು ಕೇಳದೆ ತವರು ಮನೆಗೆ ಹೋಗುತ್ತಿದ್ದಳು. ಎರಡು ತಿಂಗಳ ಹಿಂದೆ ಶಾಹಿನಾಜ್ ಮುಸ್ತಫಾನನ್ನು ತೊರೆದು ತವರು ಮನೆಯಲ್ಲಿ ಸೇರಿದ್ದಳು.ಈ ಕಾರಣದಿಂದಾಗಿ ಮುಸ್ತಫಾ ಮತ್ತು ಸುಲೇಮಾನ್ ನಡುವೆ ಉದ್ವಿಗ್ನತೆ ಉಂಟಾಯಿತ್ತು.ಈ ಬಗ್ಗೆ ಸುಲೇಮಾನ್ ಅವರು ಗಂಡ ಹೆಂಡತಿಯರನ್ನು ಎಷ್ಟೋ ಬಾರಿ ಮಾತುಕತೆ ನಡೆಸಿದರೂ ಫಲಪ್ರದವಾಗಲಿಲ್ಲ.

ಮೇ 22 ರಂದು ರಾತ್ರಿ 9:30 ರ ಸುಮಾರಿಗೆ ಮುಸ್ತಫಾ ಅವರಿಂದ ನಿಂದನೀಯ ಫೋನ್ ಕರೆಯ ನಂತರ ಸುಲೇಮಾನ್ ಮತ್ತು ಅವರ ಪುತ್ರರು ವಳಚ್ಚಿಳ್ ನಲ್ಲಿರುವ ಮುಸ್ತಫಾ ನಿವಾಸಕ್ಕೆ ಹೋದರು.ಮಾತುಕತೆಯ ನಂತರ ಅವರು ಹೊರಡುವಾಗ ಮುಸ್ತಫಾ ತನ್ನ ಮನೆಯಿಂದ ಹೊರಬಂದು ಸುಲೇಮಾನ್ ಅವರ ಕುತ್ತಿಗೆಗೆ ಇರಿದಿದ್ದಾನೆ ಗಲಾಟೆಯನ್ನು ಬಿಡಿಸಲು ಬಂದ ಸುಲೇಮಾನ್ ಅವರ ಇಬ್ಬರು ಪುತ್ರರಿಗೂ ಚೂರಿಯಿಂದ
ಹಲ್ಲೆ ನಡೆಸಿ ಒಬ್ಬನ ಎದೆಗೆ ಮತ್ತು ಇನ್ನೊಬ್ಬನ ಮುಂಗೈಗೆ ಗಾಯಗೊಳಿಸಿದ್ದಾನೆ.ನಂತರ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಕಣ್ಣೂರಿನ ಜನಪ್ರಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಸುಲೇಮಾನ್ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅವರ ಪುತ್ರರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ

