ಯುಎಇ : ದುಬೈಯ ಹೆಸರಾಂತ ಅನಿವಾಸಿ ಭಾರತೀಯ ಉದ್ಯಮಿ ಫಾರ್ಚೂನ್ ಗ್ರೂಪ್ ಹೋಟೆಲ್ಸ್ ನ ಮಾಲೀಕರಾದ ವಕ್ವಾಡಿ ಪ್ರವೀಣ್ ಶೆಟ್ಟಿಯವರು ತಮ್ಮ ಹೃದಯ ಶ್ರೀಮಂತಿಕೆಯಿಂದ ಜನಮಾನಸದಲ್ಲಿ ಗೌರವದ ಸ್ಥಾನಮಾನವನ್ನು ಪಡೆದವರು. ದುಬಾಯಿಯಲ್ಲಿರುವ ಅನಿವಾಸಿ ಭಾರತೀಯರ ಸುಖಕಷ್ಟದಲ್ಲಿ ಸದಾ ಭಾಗಿಯಾಗುವ ಹೃದಯವಂತ. ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ದುಬಾಯಿ ಘಟಕದ ರೂವಾರಿಗಳಾಗಿ ಟ್ರಸ್ಟಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರ ಅತ್ಯಾಪ್ತರಾದ ಶ್ರೀಯುತರು ಯಕ್ಷದ್ರುವ ಫೌಂಡೇಶನ್ ನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಬೆನ್ನೆಲುಬಾಗಿ ನಿಂತು ಪಟ್ಲರಿಗೆ ಸಹಕರಿಸುವ ಧೀಮಂತ ವ್ಯಕ್ತಿ. ಈಗ ಟ್ರಸ್ಟಿನ ದಶಮ ಸಂಭ್ರಮದ ಸಂದರ್ಭದಲ್ಲಿ ಶಶಿಧರ ಶೆಟ್ಟಿ ಬರೋಡ ಅವರ ವಿಶೇಷ ಮನವಿಗೆ ಸ್ಪಂದಿಸಿ ಪಟ್ಲ ಫೌಂಡೇಶನ್ ಗೆ 25 ಲಕ್ಷ ರೂಪಾಯಿಗಳ ದೇಣಿಗೆಯೊಂದಿಗೆ ಸಂಪೂರ್ಣ ಸಹಕಾರ ನೀಡಿರುತ್ತಾರೆ.
ಆದರಣೀಯರಿಗೆ ಯಕ್ಷದ್ರುವ ಪಟ್ಲ ಕೇಂದ್ರ ಸಮಿತಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ
ಡಾ. ಕನ್ಯಾನ ಸದಾಶಿವ ಶೆಟ್ಟಿ ಗೌರವಾಧ್ಯಕ್ಷರು ಕೇಂದ್ರ ಸಮಿತಿ
ಡಾ. ಪ್ರಕಾಶ್ ಶೆಟ್ಟಿ ಬಂಜಾರ
ಗೌರವಾಧ್ಯಕ್ಷರು ದಶಮಾನೋತ್ಸವ ಸಮಿತಿ
ಶ್ರೀ ಬರೋಡ ಶಶಿಧರ ಶೆಟ್ಟಿ
ಅಧ್ಯಕ್ಷರು ದಶಮಾನೋತ್ಸವ ಸಮಿತಿ
ಹಾಗೂ ಸರ್ವ ಪದಾಧಿಕಾರಿಗಳು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು

