ದುಬೈ : ನಾಳೆ ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ರಾಷ್ಟ್ರೀಯ ಕಲಾ ಸಮ್ಮೇಳನಕ್ಕೆ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿಯವರ ಸಂಪೂರ್ಣ ಸಹಕಾರದಿಂದ ಫೌಂಡೇಶನ್ ದುಬೈ ಘಟಕದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಹಾಗೂ ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ರವರ ನೇತೃತ್ವದಲ್ಲಿ ಪಟ್ಲ ದಶಮ ಸಂಭ್ರಮದ ಈ ಸಂದರ್ಭದಲ್ಲಿ ದುಬೈಯಲ್ಲಿರುವ ಉದಾರ ಮನಸ್ಸಿನ ದಾನಿಗಳಿಂದ ಸುಮಾರು 37.5 ಲಕ್ಷ ರೂ ದೇಣಿಗೆ ಸಂಗ್ರಹಿಸಿ ಯಕ್ಷಧ್ರುವ ಫೌಂಡೇಶನಿಗೆ ನೀಡಲಾಗಿದೆ.


ಅಲ್ಲದೆ ಇನ್ನಷ್ಟು ದಾನಿಗಳನ್ನು ಸಂಪರ್ಕಿಸಿ ದೇಣಿಗೆ ಸಂಗ್ರಹಿಸುವುದಾಗಿ ತಿಳಿಸಿದ್ದಾರೆ.ಯಕ್ಷದ್ರುವ ಪಟ್ಲ ದುಬೈ ಘಟಕದ ಎಲ್ಲಾ ಪದಾಧಿಕಾರಿಗಳಿಗೆ,ಯಕ್ಷಗಾನ ಅಭ್ಯಾಸ ತರಗತಿಯ ಸದಸ್ಯರಿಗೆ, ಫೌಂಡೇಶನ್ ಗೆ ಸ್ಪಂದಿಸಿದ ಎಲ್ಲ ದಾನಿಗಳಿಗೆ ಯಕ್ಷದ್ರುವ ಪಟ್ಲ ಫೌಂಡೇಶನ್ ಕೇಂದ್ರ ಸಮಿತಿಯ ಪರವಾಗಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ. ಕನ್ಯಾನ ಸದಾಶಿವ ಶೆಟ್ಟಿ ,ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ. ಪ್ರಕಾಶ್ ಶೆಟ್ಟಿ ಬಂಜಾರ,ಹಾಗೂ ದಶಮಾನೋತ್ಸವ ಸಮಿತಿ ಅಧ್ಯಕ್ಷರಾದ ಬರೋಡ ಶಶಿಧರ ಶೆಟ್ಟಿ ಹಾಗೂ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ವತಿಯಿಂದ ಧನ್ಯವಾದವನ್ನು ಸಮರ್ಪಿಸಿದ್ದಾರೆ.


ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ

