ಪಾಕಿಸ್ತಾನದ 17 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಹಾಗೂ ಜನಪ್ರಿಯ ಟಿಕ್ಟಾಕ್,ಯೂಟ್ಯೂಬರ್ ಸನಾ ಯೂಸಫ್ ಅವರನ್ನು ಸೋಮವಾರ ಸಂಜೆ ಇಸ್ಲಾಮಾಬಾದ್ನಲ್ಲಿರುವ ತನ್ನ ಮನೆಯೊಳಗೆ ನುಗ್ಗಿ ಗುಂಡಿಕ್ಕಿ ಕೊಲ್ಲಲಾಗಿದೆ.ಈ ಕೊಲೆ ದೇಶಾದ್ಯಂತ ಅನೇಕರನ್ನು ಬೆಚ್ಚಿಬೀಳಿಸಿದೆ.ಕಳೆದ ವಾರ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಹದಿಹರೆಯದ ಸನಾ ಯೂಸುಫ್ ಅಪರಿಚಿತ ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಚಿಕ್ಕಮ್ಮನ ಮುಂದೆಯೇ ಗುಂಡಿಕ್ಕಿ ಕೊಂದಿದ್ದಾನೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.

ದಾಳಿಕೋರ ಸಂಜೆ 5 ಗಂಟೆ ಸುಮಾರಿಗೆ ಸನಾ ಮನೆಗೆ ಪ್ರವೇಶಿಸಿದನು. ಅವಳನ್ನು ಕೊಲ್ಲುವ ಉದ್ದೇಶದಿಂದ ಅವನು ಸನಾ ಯೂಸುಫ್ ಮೇಲೆ ನೇರವಾಗಿ ಗುಂಡು ಹಾರಿಸಿದನು.ಎರಡು ಗುಂಡುಗಳು ಅವಳ ಹೊಟ್ಟೆಯನ್ನು ಪ್ರವೇಶಿಸಿದವು. ದಾಳಿಯಲ್ಲಿ ಸನಾ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆ ಅವರು ಸಾವನ್ನಪ್ಪಿದರು.

ಮಂಗಳವಾರ ಇಸ್ಲಾಮಾಬಾದ್ ಪೊಲೀಸರು ಪ್ರಕರಣದ ಪ್ರಮುಖ ಶಂಕಿತನನ್ನು ಬಂಧಿಸಿದ್ದಾರೆ ಎಂದು ದೃಢಪಡಿಸಿದರು. ಪೊಲೀಸರು ಆ ವ್ಯಕ್ತಿಯಿಂದ ಪಿಸ್ತೂಲ್ ಮತ್ತು ಸನಾಳ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.ಶಂಕಿತನು ಕೊಲೆಯನ್ನು ಒಪ್ಪಿಕೊಂಡಿದ್ದಾನೆ ಕೊಲೆಗೆ ಕಾರಣ ಏನೆಂದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಉಮರ್ ಹಯಾತ್ ಅಲಿಯಾಸ್ “ಕಾಕಾ” ಎಂದೂ ಕರೆಯಲ್ಪಡುವ ಈತ ಸ್ವತಃ ಟಿಕ್ಟೋಕರ್ ಆಗಿದ್ದು, ಸನಾ ಯೂಸಫ್ನ ಸ್ನೇಹಿತನೆಂದು ಹೇಳಿಕೊಂಡಿದ್ದ ಎಂದು ವರದಿಯಾಗಿದೆ. ಮಾರಣಾಂತಿಕ ಘಟನೆಯ ನಂತರ ಅವನು ಇಸ್ಲಾಮಾಬಾದ್ನಿಂದ ಪರಾರಿಯಾಗಿದ್ದನು ನಂತರ ಆತ ಫೈಸಲಾಬಾದ್ನಲ್ಲಿ ಪತ್ತೆ ಹಚ್ಚಲ್ಪಟ್ಟನು ಅಲ್ಲಿ ಪೊಲೀಸರು ಅವನನ್ನು ಬಂಧಿಸಿದ್ದಾರೆ.

