ಮಂಗಳೂರು : ರೋಟಾರೆಕ್ಟ್ ಎಂಬುದು ರೋಟರಿ ಇಂಟರ್ನ್ಯಾಷನಲ್ನ ಅಧೀನದಲ್ಲಿ ಕಾರ್ಯನಿರ್ವಹಿಸುವ, ನಾಯಕತ್ವ, ಸೇವೆ ಮತ್ತು ಸ್ನೇಹಸಂಭಂಧಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲಿರುವ ಯುವ ನಾಯಕರ ಜಾಗತಿಕ ಚಲನೆಯಾಗಿದೆ. ದಕ್ಷಿಣ ಏಷ್ಯಾದ ರೋಟಾರೆಕ್ಟ್ ಚಟುವಟಿಕೆಗಳ ಕೇಂದ್ರಬಿಂದು RSAMDIO – ರೋಟಾರೆಕ್ಟ್ ಸೌತ್ ಏಷಿಯಾ ಮಲ್ಟಿ-ಡಿಸ್ಟ್ರಿಕ್ಟ್ ಇನ್ಫರ್ಮೇಶನ್ ಆರ್ಗನೈಸೇಷನ್, ಇದು 8 ದೇಶಗಳು ಮತ್ತು 44 ಸದಸ್ಯ ಜಿಲ್ಲೆಗಳನ್ನು ಒಳಗೊಂಡಿದೆ, ಹಾಗೂ 79,000 ಕ್ಕೂ ಹೆಚ್ಚು ರೋಟಾರೆಕ್ಟರ್ಗಳು ಇದರ ಭಾಗವಾಗಿದ್ದಾರೆ.
ಈ ಸಂಭ್ರಮದಲ್ಲಿ 2025–26ನೇ ಸಾಲಿನ RSAMDIO ಇನ್ಸ್ಟಾಲೇಶನ್ ಸಮಾರಂಭ – ITTEHAD ಹಾಗೂ ROAR (RSAMDIO ಉತ್ತಮ ಪ್ರಶಸ್ತಿ ಪ್ರಧಾನ) ಜೂನ್ 7 ಮತ್ತು 8, 2025 ರಂದು ಸಂಜೆ 3:30 ಗಂಟೆಯಿಂದ ಆರಂಭವಾಗಿ ಮಂಗಳೂರಿನ ಆವತಾರ್ ಹೋಟೆಲ್ನಲ್ಲಿ ಜರುಗಲಿದೆ. ಎಂದು ಡಾ.ಬಿ.ದೇವದಾಸ್ ರೈಯವರು ಹೇಳಿದರು.

ಈ ಸಮಾರಂಭ ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುತ್ತಿರುವುದು ವಿಶೇಷ. ಇನ್ನೊಂದು ಹೆಮ್ಮೆಯ ಸಂಗತಿ ಎಂದರೆ, RSAMDIO ಗೆ ಅಧ್ಯಕ್ಷರಾಗಿ ಕರ್ನಾಟಕದಿಂದ ಆಯ್ಕೆ ಆದವರಲ್ಲಿ ಡೇರಲ್ ಎರಡನೆಯವರು.ಹಾಗೂ ಅವರು ಈ ಸಂಸ್ಥೆಯ 16ನೇ ಅಧ್ಯಕ್ಷರಾಗಲಿದ್ದಾರೆ ಎಂದರು.

3 ದೇಶಗಳು ಮತ್ತು 23 ರಾಜ್ಯಗಳಿಂದ 250 ಕ್ಕೂ ಹೆಚ್ಚು ರೋಟಾರೆಕ್ಟ್ ಪ್ರತಿನಿಧಿಗಳು ಭಾಗವಹಿಸಲಿರುವ ಈ 2 ದಿನಗಳ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟರಿ ಇಂಟರ್ನ್ಯಾಷನಲ್ ಡೈರೆಕ್ಟರ್ ಅನಿರುದ್ಧ ರಾಯ್ ಚೌಧುರಿ ಅವರು ಭಾಗವಹಿಸಿ ಪ್ರಧಾನ ಭಾಷಣ ನೀಡಲಿದ್ದಾರೆ. ಗೌರವಾನ್ವಿತ ಅತಿಥಿಯಾಗಿ RI ಜಿಲ್ಲೆ 3181 ರ ಜಿಲ್ಲಾ ಗವರ್ನರ್ Rtn. ವಿಕ್ರಮದತ್ತ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ITTEHAD 2025 ಕಾರ್ಯಕ್ರಮವು ನಾಯಕತ್ವ, ಸಂಸ್ಕೃತಿ ಮತ್ತು ಸೇವೆಯ ಮಹತ್ವದ ಉತ್ಸವವಾಗಲಿದೆ. ಕರಾವಳಿಯ ಹೃದಯ ಮಂಗಳೂರು ನಗರವು ಈ ಪ್ರತಿಷ್ಟಿತ ಕಾರ್ಯಕ್ರಮದ ಆತಿಥ್ಯ ವಹಿಸಲಿದ್ದು ಇತಿಹಾಸ ನಿರ್ಮಾಣದ ಕ್ಷಣವನ್ನು ಎದುರಿಸುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಎಂ.ವಿ. ಮಲ್ಯ, ಭಾಸ್ಕರ್ ರೈ ಕಟ್ಟ – ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ನ ಚುನಾಯಿತ ಅಧ್ಯಕ್ಷರು; ಪಿಡಿಜಿ ಎಂಡಿ ಮತ್ತು ಪಿಡಿಆರ್ಆರ್ ಪಿಎಚ್ಎಫ್ ಡ್ಯಾರಿಲ್ ಸ್ಟೀವನ್ ಡಿಸೋಜಾರವರು ಉಪಸ್ಥಿತರಿದ್ದರು
ಚಿತ್ರ : ಸತೀಶ್ ಕಾಪಿಕಾಡ್

