ಹರಿದ್ವಾರ : ಧಾರ್ಮಿಕ ನಗರಿ ಹರಿದ್ವಾರದಲ್ಲಿ 13ರ ಹರೆಯದ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ. ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷೆ ಅನಾಮಿಕ ಶರ್ಮಾ ತನ್ನ ಸ್ವಂತ ಮಗಳನ್ನು ತನ್ನ ಪ್ರಿಯಕರ ಸುಮಿತ್ ಪಟ್ಟಾಲ್ ಮತ್ತು ಆತನ ಸ್ನೇಹಿತರಿಗೆ ಒಪ್ಪಿಸಿದ್ದಾಳೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಬಾಲಕಿ ಕೂಡ ಮ್ಯಾಜಿಸ್ಟ್ರೇಟ್ ಮುಂದೆ ಸೆಕ್ಷನ್ 164 ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾಳೆ. ಆರೋಪಿ ತಾಯಿ ಮತ್ತು ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಪೊಲೀಸರ ಪ್ರಕಾರ, ಬಿಜೆಪಿ ಮಹಿಳಾ ನಾಯಕಿ ಅನಾಮಿಕ ಶರ್ಮಾ ಪತಿಯೊಂದಿಗೆ ಜಗಳವಾಡಿದ ನಂತರ ತನ್ನ ಪ್ರಿಯಕರ ಸುಮಿತ್ ಪಟ್ಟಾಲ್ ನೊಂದಿಗೆ ವಾಸಿಸುತ್ತಿದ್ದಳು. ಅವಳು ತನ್ನ ಮಗಳನ್ನು ಪತಿಯೊಂದಿಗೆ ಬಿಟ್ಟಿದ್ದಳು.

ಕಳೆದ ಜನವರಿಯಲ್ಲಿ, ಮಗಳನ್ನು ಪ್ರವಾಸಕ್ಕೆ ಕರೆದೊಯ್ಯುವ ನೆಪದಲ್ಲಿ ಅನಾಮಿಕಾ ತನ್ನ ಪ್ರಿಯಕರ ಸುಮಿತ್ ಪಟ್ವಾಲ್ ಮತ್ತು ಅವನ ಸ್ನೇಹಿತ ಶುಭಮ್ ಅವರ ಕಾರಿನಲ್ಲಿ ಬಿಎಚ್ಇಎಲ್ ಕ್ರೀಡಾಂಗಣಕ್ಕೆ ಕರೆದೊಯ್ದು ಅಲ್ಲಿ ಮದ್ಯ ಸೇವಿಸಿದ ನಂತರ ಇಬ್ಬರೂ ಅಪ್ರಾಪ್ತ ಮಗಳನ್ನು ಬೆದರಿಸಿ ತನ್ನ ತಾಯಿಯ ಒಪ್ಪಿಗೆಯೊಂದಿಗೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಅದಲ್ಲದೆ ಸಂತ್ರಸ್ತೆಯ ಮೇಲೆ ಆಗ್ರಾ, ವೃಂದಾವನ ಮತ್ತು ಹರಿದ್ವಾರದ ಹೋಟೆಲ್ಗಳಲ್ಲಿಯೂ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಯಾರಿಗಾದರೂ ಏನಾದರೂ ಹೇಳಿದರೆ ತಂದೆಯನ್ನು ಕೊಲ್ಲುವುದಾಗಿ ತಾಯಿ ಮಗಳಿಗೆ ಬೆದರಿಕೆ ಹಾಕಿದ್ದಾಳೆ.

ಮಂಗಳವಾರ ಅಪ್ರಾಪ್ತ ಬಾಲಕಿ ತನ್ನ ತಂದೆಗೆ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಹೇಳಿಕೊಂಡಾಗ ವಿಷಯ ಬೆಳಕಿಗೆ ಬಂದಿದ್ದು,ನಂತರ ಮಗಳನ್ನು ರಾಣಿಪುರ ಪೊಲೀಸ್ ಠಾಣೆಗೆ ಕರೆದೊಯ್ದು ಪೋಲಿಸರಿಗೆ ವಿಷಯವನ್ನು ತಿಳಿಸಲಾಗಿದೆ ಇದೀಗ ಪೊಲೀಸರು ಮೂವರ ವಿರುದ್ಧ ಬಿಎನ್ಎಸ್ ಸೆಕ್ಷನ್ 70 (2) (ಸಾಮೂಹಿಕ ಅತ್ಯಾಚಾರ), 351(3) (ಕ್ರಿಮಿನಲ್ ಬೆದರಿಕೆ), 3(5) (ಸಾಮಾನ್ಯ ಉದ್ದೇಶವನ್ನು ಮುಂದಿಟ್ಟುಕೊಂಡು ಹಲವಾರು ವ್ಯಕ್ತಿಗಳಿಂದ ಕ್ರಿಮಿನಲ್ ಕೃತ್ಯ) ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅನಾಮಿಕಾ ಈ ಹಿಂದೆ ಬಿಜೆಪಿ ಮಹಿಳಾ ಮೋರ್ಚಾದ ಹರಿದ್ವಾರ ಜಿಲ್ಲಾ ಘಟಕದ ಮುಖ್ಯಸ್ಥರಾಗಿದ್ದರು, ಆದರೆ, ಈ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದ ನಂತರ, ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಯಿತು.
ಆಗಸ್ಟ್ 2024 ರಿಂದ ಅವರು ಯಾವುದೇ ಪಕ್ಷದ ಹುದ್ದೆಯನ್ನು ಅಲಂಕರಿಸಿಲ್ಲ ಎಂದು ಅಲ್ಲಿನ ಬಿಜೆಪಿ ಮೂಲಗಳು ಹೇಳಿಕೊಂಡಿವೆ.

