ಬೆಂಗಳೂರು : ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಸೀಸನ್ -21ರ ಫೈನಲ್ ಸ್ವರ್ಧೆ ಜೂನ್ 5 ರಂದು ನಡೆದಿದ್ದು ಫೈನಲ್ ನಲ್ಲಿ ಮಹಿಳಾ ಸ್ವರ್ಧಿಯು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ಕಾರ್ಯಕ್ರಮ ಟಿವಿಯಲ್ಲಿ ಇದೇ ಶನಿವಾರ ಹಾಗೂ ಭಾನುವಾರ ಪ್ರಸಾರವಾಗಲಿದೆ.

ಸರಿಗಮಪ ಸೀಸನ್ 21ರ ರಿಯಾಲಿಟಿ ಶೋನಲ್ಲಿ ಅಂತಿಮ ಹಂತದಲ್ಲಿ ಆರು ಮಂದಿ ಆಯ್ಕೆ ಆಗಿದ್ದರು.ಈ ಮೊದಲು ‘ಟಿಕೆಟ್ ಟು ಫಿನಾಲೆ’ ಸ್ವರ್ಧೆ ನಡೆಸಲಾಯಿತು. ಈ ಸುತ್ತಿನಲ್ಲಿ 13 ಸ್ಪರ್ಧಿಗಳು ಭಾಗವಹಿಸಿದ್ದರು.ನಂತರ ಮೇ 24 ಮತ್ತು 25 ನಡೆದ ಸೆಮಿಫೈನಲ್ ನಡೆದು ಅದರಲ್ಲಿ 6 ಮಂದಿ ಗಾಯಕರು ಟೈಟಲ್ಗಾಗಿ ಪೈಪೋಟಿ ನಡೆದಿತ್ತು ದ್ಯಾಮೇಶ, ಬಾಳು ಬೆಳಗುಂದಿ, ರಶ್ಮಿ ಡಿ, ಅಮೋಘ ವರ್ಷ, ಶಿವಾನಿ ಮತ್ತು ಆರಾಧ್ಯ ರಾವ್ ನಡುವೆ ಹಣಾಹಣಿ ಇತ್ತು. ಆರಾಧ್ಯಾ ರಾವ್ ಹಾಗೂ ಶಿವಾನಿ ಇಬ್ಬರೂ ನೇರವಾಗಿ ಫಿನಾಲೆಗೆ ಪ್ರವೇಶ ಪಡೆದುಕೊಂಡಿದ್ದರು.

ಇದೀಗ ಟಾಪ್ 3 ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟಾಪ್ 3ನಲ್ಲಿ ಮೂವರು ಮಹಿಳಾ ಸ್ಪರ್ಧಿಗಳು ಸ್ಥಾನ ಪಡೆದಿದ್ದಾರೆ.

ಫೈನಲ್ ಸುತ್ತಿನಲ್ಲಿ ನಡೆದ ಪೈಪೋಟಿಯಲ್ಲಿ ಶಿವಾನಿ ವಿನ್ನರ್ ಆಗಿ ಆಯ್ಕೆಯಾಗಿದ್ದಾರೆ. ಆರಾಧ್ಯಾ ರಾವ್ ರನ್ನರ್ ಅಪ್ ಆಗಿದ್ದಾರೆ ಹಾಗೂ ರಶ್ಮಿ.ಡಿ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ. ಜೂನ್ 7ರಂದು ಜೀ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಕಾಣಲಿದೆ.

