ಮಂಗಳೂರು : ಮೇ 1ರಂದು ಮಂಗಳೂರಿನ ಹೊರವಲಯದ ಬಜ್ಪೆ ಸಮೀಪದ ಕಿನ್ನಿಪದವು ಎಂಬಲ್ಲಿ ದುಷ್ಕರ್ಮಿಗಳ ಗುಂಪೊಂದು ಹಿಂದೂ ಸಂಘಟನೆಯ ನಾಯಕ ಸುಹಾಸ್ ಶೆಟ್ಟಿ (42) ಯನ್ನು ಹತ್ಯೆ ಮಾಡಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಇಲ್ಲಿಯವರೆಗೆ 11 ಜನರನ್ನು ಬಂಧಿಸಿದ್ದಾರೆ.

ಕಳೆದ ತಿಂಗಳು ಪ್ರಕರಣವನ್ನು NIA ತನಿಖೆಗೆ ವರ್ಗಾಯಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕರು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚಿಗೆ ಬಜ್ಪೆಯಲ್ಲಿ ನಡೆದ ಬಜ್ಪೆ ಚಲೋ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ,ಹಿಂದೂ ಸಂಘಟನೆಯವರು ಹಾಗೂ ಸುಹಾಸ್ ಶೆಟ್ಟಿಯ ತಾಯಿಯವರು ಮಗನ ಸಾವಿನ ನ್ಯಾಯ ದೊರಕಿಸಿ ಕೊಡಲು ಸರಕಾರ NIA ಗೆ ನೀಡಬೇಕೆಂದು ಒತ್ತಾಯಿಸಿದ್ದರು.

ಇದೀಗ ಸುಹಾಸ್ ಶೆಟ್ಟಿ ಅವರ ಹತ್ಯೆಯ ತನಿಖೆಯನ್ನು ಈಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೈಗೆತ್ತಿಕೊಳ್ಳಲಿದೆ. ಗೃಹ ಸಚಿವಾಲಯ (ಎಂಎಚ್ಎ) ತನಿಖೆಯನ್ನು ಸಂಸ್ಥೆಗೆ ವಹಿಸಿದೆ.ಗೃಹ ಸಚಿವಾಲಯದಿಂದ (MHA) ಆದೇಶ ಬಂದ ನಂತರ NIA ಈಗ ಸುಹಾಸ್ ಕೊಲೆ ಪ್ರಕರಣದ ತನಿಖೆ ನಡೆಸಲಿದೆ.ಭಯೋತ್ಪಾದನಾ ನಿಗ್ರಹ ಸಂಸ್ಥೆಯು ಎಲ್ಲಾ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಪ್ರಕರಣದ ಬಗ್ಗೆ ವಿವರವಾಗಿ ಪ್ರಶ್ನಿಸಲಿದೆ.

ಕೊಲೆಯಾದ ಸುಹಾಸ್ ಶೆಟ್ಟಿ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳಿದ್ದು, ಅವನನ್ನು ರೌಡಿಶೀಟರ್ ಎಂದು ಪರಿಗಣಿಸಲಾಗಿತ್ತು. 2022 ರಲ್ಲಿ ಕಾಟಿಪಳ್ಳ ನಿವಾಸಿ ಫಾಜಿಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.

